ಶಿರಸಿ : ಪ್ರಯಾಣಿಕರು ಬಸ್‌ನಲ್ಲಿ ಮರೆತು ಬಿಟ್ಟುಹೋಗಿದ್ದ 6-7 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಾರಸುದಾರರಿಗೆ ವಾಪಸ್ ಮಾಡುವ ಮೂಲಕ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ಘಟಕದ ಚಾಲನಾ ಸಿಬ್ಬಂದಿ ಪ್ರಮಾಣಿಕತೆ ಮೆರೆದಿದ್ದಾರೆ. ನಿರ್ವಾಹಕ ಸೇವಾಲಾಲ್ ರಾಥೋಡ್ ಹಾಗೂ ಚಾಲಕ ವಿನೋದ್ ನಾಯ್ಕ್ ಪ್ರಯಾಣಿಕರು ಬಿಟ್ಟು ಹೋಗಿದ್ದ ಸುಮಾರು 7 ಲಕ್ಷ ರೂ. ಮೌಲ್ಯದ ಬೆಳ್ಳಿ ಬಂಗಾರದ ಆಭರಣಗಳನ್ನು ವಾರಸುದಾರರಿಗೆ ಮರಳಿಸಿ ತಮ್ಮ ಸೇವಾ ಪ್ರಾಮಾಣಿಕತೆಯನ್ನು ಮೆರೆದ ಚಾಲನಾ ಸಿಬ್ಬಂದಿ.
ಬಸ್‌ನಲ್ಲಿ ಪ್ರಯಾಣಿಕರು ಚಿನ್ನಾಭರವನ್ನು ಬಿಟ್ಟು ಹೋಗಿರುವ ವಿಷಯವನ್ನು ಕೂಡಲೇ ಸಿರ್ಸಿ ಘಟಕ ವ್ಯವಸ್ಥಾಪಕ ಸರ್ವೇಶ್ ನಾಯಕ್ ಅವರ ಗಮನಕ್ಕೆ ತಂದಿದ್ದಾರೆ. ಅವರು ಆ ಎಲ್ಲ ಆಭರಣಗಳನ್ನು ಪಡೆದು ಜೋಪಾಮ ನಾಡಿದ್ದರು.
ಇನ್ನು ಚಾಲನಾ ಸಿಬ್ಬಂದಿಯ ಈ ಪ್ರಾಮಾಣಿಕತನವನ್ನು ಶಿರಸಿ ವಿಭಾಗಿಯ ನಿಯಂತ್ರಾಧಿಕಾರಿ ಶ್ರೀನಿವಾಸ್ ನಾಯಕ್ ಶ್ಲಾಘಿಸಿದ್ದು, ವಿಶೇಷ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಅವರ ಪ್ರಾಮಾಣಿಕ ಸೇವೆಯನ್ನು ಕೊಂಡಾಡಿದ್ದಾರೆ. ಇಂತಹ ನೌಕರರು ಸಂಸ್ಥೆಯ ಘನತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.