ಭಟ್ಕಳ : ತಾಲೂಕಿನ ಮಾವಿನಕಟ್ಟಾ ಕೋಕ್ತಿ ಕ್ರಾಸ್‌ನಲ್ಲಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿಯೋರ್ವನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. 66 ವರ್ಷದ ಹೊನ್ನಪ್ಪ ತಿಮ್ಮಯ್ಯ ನಾಯ್ಕ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಈತ ಕೋಕ್ತಿ ಕ್ರಾಸ್‌ನಿಂದ ಮಾವಿನಕಟ್ಟಾ ಮೀನು ಮಾರುಕಟ್ಟೆ ಕಡೆ ರಸ್ತೆ ದಾಟುತ್ತಿದ್ದ ವೇಳೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ದೇಹದ ಭಾಗಗಳು ಸಂಪೂರ್ಣ ಛಿದ್ರ ಛಿದ್ರವಾಗಿವೆ. ರಸ್ತೆಯಲ್ಲಿ ರಕ್ತದ ಕೋಡಿ ಕೋಡಿ ಹರಿದಿದ್ದು ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಖಾಸಗಿ ಬಸ್ ಚಾಲಕ ಅತವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ತನ್ನ ವಿದ್ಯಾರ್ಥಿನಿಗೇ ಅಶ್ಲೀಲ ಮೆಸೇಜ್ ಕಳಿಸಿದ ಉಪನ್ಯಾಸಕ : ಸಾರ್ವಜನಿಕರಿಂದ ಬಿತ್ತು ಗೂಸಾ.