ಹೊನ್ನಾವರ: ಓವರ್ ಟೇಕ್ ಮಾಡುವ ವಿಚಾರದಲ್ಲಿ ಜಗಳವಾಗಿ ಬೈಕ್ ಸವಾರನೋರ್ವ ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಹೊನ್ನಾವರ ಡಿಪ್ಪೋಗೆ ಸೇರಿದ ಬಸ್ಸಿನ ಚಾಲಕ ಕೃಷ್ಣಾ ನಾಯ್ಕ, ನಿರ್ವಾಹಕ ಮರಿಯಪ್ಪ ಹಲ್ಲೆಗೊಳಗಾದವರಾಗಿದ್ದಾರೆ. ತಾಲೂಕಿನ ಟೊಂಕ ಬಳಿ ಪ್ರಯಾಣಿಕರನ್ನ ಇಳಿಸಿ ತೆರಳುವಾಗ ಓವರ್ ಟೇಕ್ ಮಾಡುವ ಸಂಭಂದ ಬಸ್ಸಿನ ಚಾಲಕ ಹಾಗೂ ಬೈಕ್ ಚಾಲಕನ ನಡುವೆ ಜಗಳವಾಗಿದೆ.

RELATED ARTICLES  ಕರವಾಳದ ಶಕ್ತಿಗಿಂತ ಕರುಣೆಯ ಶಕ್ತಿ ಹೆಚ್ಚು: ರಾಘವೇಶ್ವರ ಶ್ರೀ

ಇದೇ ವೇಳೆ ಬೈಕ್ ಚಾಲಕ ಸಾರಿಗೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು ಹಲ್ಲೆ ಮಾಡುವ ದೃಶ್ಯವನ್ನ ಪ್ರಯಾಣಿಕರೋರ್ವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

RELATED ARTICLES  ಅಯ್ಯಪ್ಪ ಸ್ವಾಮಿ ಯಾರು? ಶಬರಿಮಲೆಯ ಶ್ರೇಷ್ಠತೆ ಏನು? ಇಲ್ಲಿದೆ ನೋಡಿ ಮಾಹಿತಿ.

ಇನ್ನು ಬಸ್ಸಿನ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕರ್ತವ್ಯ ನಿರತ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವುದಕ್ಕೆ ಹಲವರು ಖಂಡನೆ ಸಹ ವ್ಯಕ್ತಪಡಿಸಿದ್ದಾರೆ.