ಭಟ್ಕಳ: ಆಳ ಸಮುದ್ರದಲ್ಲಿ ಈಜಾಡದಂತೆ ತಿಳಿಸಿದ ಲೈಫ್ ಗಾರ್ಡ್ಗಳ ಜೊತೆ ಪ್ರವಾಸಿಗರು ಅನುಚಿತ ವರ್ತನೆ ತೋರಿದ ಘಟನೆ ತಾಲೂಕಿನ ಮುರ್ಡೇಶ್ವರದ ಕಡಲತೀರದಲ್ಲಿ ನಡೆದಿದೆ. ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಇನ್ನು ಸಮುದ್ರಕ್ಕೆ ಈಜಲು ಇಳಿಯುವ ಪ್ರವಾಸಿಗರು ಅಪಾಯಕ್ಕೆ ಸಿಲುಕುತ್ತಿರುವುದರಿಂದ ಆಳ ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ್ಗಳು ತಿಳಿಸುತ್ತಿದ್ದು, ಈ ವೇಳೆ ಲೈಫ್ ಗಾರ್ಡ್ಗಳ ಮೇಲೆ ಪ್ರವಾಸಿಗರು ಕಿಡಿಕಾರುತ್ತಿದ್ದಾರೆ.
ಅಪಾಯಕ್ಕೆ ಸಿಲುಕದಂತೆ ಮುಂಜಾಗೃತ ಕ್ರಮವಾಗಿ ಲೈಫ್ ಗಾರ್ಡ್ ಸಿಬ್ಬಂದಿಗಳಿoದ ಸೂಚನೆ ನೀಡಿದರು ಅದನ್ನು ಧಿಕ್ಕರಿಸುತ್ತಿರುವ ಕೆಲ ಪ್ರವಾಸಿಗರು ಲೈಫ್ ಗಾರ್ಡ್ ಸಿಬ್ಬಂದಿಗಳ ಮೇಲೆಯೇ ದಬ್ಬಾಳಿಕೆ ನಡೆಸುತ್ತಿದ್ದು, ಪ್ರವಾಸಿಗರ ವರ್ತನೆಗೆ ಲೈಫ್ ಗಾರ್ಡ್ ಸಿಬ್ಬಂದಿಗಳು ಹೈರಾಣಾಗಿದ್ದಾರೆ.
ವರ್ಷಾಚರಣೆಗೆ ಪ್ರವಾಸಿಗರು ಹೆಚ್ಚು ಬರುತ್ತಿರುವ ವೇಳೆ ಕಡಲ ತೀರದಲ್ಲಿ ಪೊಲೀಸರ ನೇಮಕವನ್ನು ಸಹ ಮಾಡಬೇಕು. ಲೈಫ್ ಗಾರ್ಡ್ ಸಿಬ್ಬಂದಿಗಳ ಜೊತೆ ಪೊಲೀಸರು ಸೂಚನೆ ನೀಡಿದರೆ ಪ್ರವಾಸಿಗರು ಸೂಚನೆಯನ್ನ ಕೇಳಿ ಅಪಾಯಕ್ಕೆ ಸಿಲುಕುವುದು ಕಡಿಮೆಯಾಗಲಿದೆ ಎನ್ನುವ ಅಭಿಪ್ರಾಯ ಸ್ಥಳೀಯರಿಂದ ಕೇಳಿ ಬಂದಿದೆ.