ದಾಂಡೇಲಿ: ನಗರದ ಕಾಗದ ಕಾರ್ಖಾನೆಯಿಂದ ಸರಕನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಚಾಲಕನಿಗೆ ಗಾಯವಾದ ಘಟನೆ ತಾಲ್ಲೂಕಿನ ದಾಂಡೇಲಿ- ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಬರುವ ಆಲೂರು ಕ್ರಾಸ್ ಹತ್ತಿರ ಶುಕ್ರವಾರ ಸಂಜೆ ನಡೆದಿದೆ.
ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಿಂದ ಸರಕನ್ನು ತುಂಬಿಕೊoಡು ಕಲ್ಕತ್ತಾಗೆ ಹೊರಡಿದ್ದ ಲಾರಿ, ದಾಂಡೇಲಿ- ಹಳಿಯಾಳ ರಸ್ತೆಯಲ್ಲಿ ಬರುವ ಆಲೂರು ಕ್ರಾಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಆಂದ್ರಪ್ರದೇಶ ಮೂಲದ ಮಲ್ಲಪ್ಪ ಎಂಬಾತನಿಗೆ ತೀವ್ರ ಗಾಯವಾಗಿದ್ದು, ಕೂಡಲೆ 108 ಆಂಬುಲೆನ್ಸ್ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಸ್ಥಳಕ್ಕೆ 112 ಪೊಲೀಸ್ ತಂಡ ಹಾಗೂ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

RELATED ARTICLES  ನಂಬಿಕೆ ಜೀವನಕ್ಕೆ ಅಮೃತ ಇದ್ದಂತೆ: ರಾಘವೇಶ್ವರ ಶ್ರೀ