ಅಂಕೋಲಾ : ವಿಭೂತಿ ಫಾಲ್ಸ್ ನಲ್ಲಿ ಮುಳುಗಿ ಯವಕ ಮೃತಪಟ್ಟ ಘಟನೆ ನಡೆದಿದೆ. ಆಂಧ್ರ ಪ್ರದೇಶ ಮೂಲದ ಶ್ಯಾಮ(25) ಎನ್ನುವ ಯವಕ ನೀರಿನಲ್ಲಿ ಮುಳುಗಿ ಮೃತ ಪಟ್ಟ ದುರ್ದೈವಿ. ಈತ ತನ್ನ 10 ಜನ ಸ್ನೇಹಿತರೊಂದಿಗೆ ಹೊಸ ವರ್ಷ ಆಚರಣೆಗಾಗಿ ಕರಾವಳಿಯ ಪ್ರದೇಶಕ್ಕೆ ಆಗಮಿಸಿದ್ದರು.

RELATED ARTICLES  ಭಟ್ಕಳದಲ್ಲಿ ಪೊಲೀಸ್ ದಾಳಿ : PFI ಸಂಘಟನೆಯ ಸದಸ್ಯರ ಮೇಲೆ ದಾಳಿ ಮುಂದುವರೆಸಿದ ಪೊಲೀಸರು.

ಅದರಂತೆ ಶುಕ್ರವಾರ ತಾಲೂಕಿನ ವಿಭೂತಿ ಫಾಲ್ಸ್ ಗೆ ಬಂದಿದ್ದು ಯುವಕರು ನೀರಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಯುವಕ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ರಕ್ಷಣಾ ತಂಡದ ಸಿಬ್ಬಂದಿ ಆತನನ್ನು ಎಳೆದು ತಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನನ್ನು ತಕ್ಷಣ ಅಂಕೋಲಾ ತಾಲೂಕಾಸ್ಪತ್ರೆಗೆ ಸಾಗಿಸಲಾಗಿತ್ತು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಸರಕಾರಿ ಪದವಿ ಪೂರ್ವ ಕಾಲೇಜು ಹಿರೇಗುತ್ತಿಯಲ್ಲಿ ಜರುಗಿದ “ಪ್ರತಿಭಾ ಪುರಸ್ಕಾರ”