ಕುಮಟಾ : ತಾಲೂಕಿನ ಪೋಸ್ಟ್ ಬೆಟ್ಕುಳಿಯ ದಿನೇಶ ಗಣಪತಿ ಗಾವಡಿ ವಯಸ್ಸು 37 ಶುಕ್ರವಾರ 30 – 12 – 2022 ರಂದು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು. ಇವತ್ತು ಡಿಸೆಂಬರ್ 31 ಶನಿವಾರ ಅಂತ್ಯಕ್ರಿಯೆ ಬೆಟ್ಕುಳಿಯಲ್ಲಿ ನಡೆಯಿತು. ಮಾದನಗೇರಿ. ಬಳಲೆಯಲ್ಲಿ ತನ್ನದೇ ಆದ ಕೇಬಲ್ ಆಫರೇಟರ್ ಆಫೀಸ್ ನಡೆಸುತ್ತಿದ್ದ. ದಿನುವಿನ ಅಕಾಲಿಕ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.
ತನ್ನವರ ನೋವುಗಳನ್ನೆಲ್ಲ ತಾನೇ ಹೊತ್ತು ತನ್ನವರಿಗಾಗಿ ನಗು ಹಂಚುವ ವ್ಯಕ್ತಿತ್ವ ಉಳ್ಳವರು ಕೆಲವರಿರುತ್ತಾರೆ ಅಂತವರೆ ನಮ್ಮ ಪಾಲಿಗೆ ಬೇಗ ಕಣ್ಮರೆಯಾಗುವುದು. ಸಜ್ಜನ ಸ್ನೇಹಿತ ಸರಳ ಸ್ವಭಾವದ ದಿವ್ಯ ಚೈತನ್ಯ ನಮ್ಮ ದಿನು ಗಾವಡಿ ಊರಿನ ಸುತ್ತಲೂ ನಗುವನ್ನು ಹಂಚಿದವನು. ಕಷ್ಟಕ್ಕೆ ಕಿವಿಯಾದವನು. ಒಳ್ಳೆಯ ಮಿತ್ರತ್ವಕ್ಕೆ ಸಾಕ್ಷಿಯಾಗಿ ನಿಂತವನು. ಇನ್ನಿಲ್ಲವೆಂಬ ಆಘಾತಕಾರಿ ಸುದ್ದಿಯೊಂದು ಮನಸ್ಸನ್ನೇ ಬಡಿದು ಬರಿದಾಗಿಸಿದೆ. ನಿನ್ನ ಜೊತೆ ಕಳೆದ ಆ ದಿನಗಳು ಅನುಭವಗಳು ಅವಿಸ್ಮರಣೀಯ, ನಿನ್ನ ಸರಳ ಸಜ್ಜನಿಕೆ. ಸ್ನೇಹಪರತೆ. ಎಲ್ಲರಿಗೂ ಮಾದರಿ ಅವನ ಅಂತಿಮ ದರ್ಶನಕ್ಕೆ ಬಂದ ಎಲ್ಲಾ ವರ್ಗದ ಎಲ್ಲಾ ವಯೋಮಾನದ ಅಪಾರ ಜನಸ್ತೋಮ ದಿನುವಿನ ಸಜ್ಜನಿಕೆ ಯನ್ನು ನೆನೆದು ಎಂತಹ ಸಜ್ಜನ ಮಿತ್ರನನ್ನು ಕಳೆದುಕೊಂಡವು ಎಂದು ಊರಿನವರೆಲ್ಲರೂ ದುಃಖಿಸುತ್ತಿದ್ದರು.
ಒಳ್ಳೆಯ ವ್ಯಕ್ತಿಯಾಗಿ ಬಾಳಿ ಬದುಕಿದ ವ್ಯಕ್ತಿ ಇಂದು ನಮ್ಮ ಮುಂದಿಲ್ಲ ಎನ್ನುವುದು ದುಃಖದ ಸಂಗತಿ. ತಂದೆ-ತಾಯಿ ಸಹೋದರರು ಸಹೋದರಿ ಅಪಾರ ಬಂಧು ಬಳಗವನ್ನು ಅಗಲಿದ ದಿನುವಿನ ದಿವ್ಯ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಚಿರ ಶಾಂತಿಯನ್ನು ನೀಡಲಿ, ದಿನುವನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ದುಃಖವನ್ನು ಬರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ಅಂತ್ಯಕ್ರಿಯೆ ಯಲ್ಲಿ ರಾಮು ಕೆಂಚನ್ ಹಿರೇಗುತ್ತಿ. ರಾಜೇಶ ಪೈ ಪ್ರಸರಣ ನೆಟವರ್ಕ್ ಕುಮಟಾ. ದೇವಿದಾಸ ನಾಯಕ. ಎನ್ ರಾಮು ಹಿರೇಗುತ್ತಿ. ರಾಜು ನಾಯಕ ಬಳಲೆ . ಪಪ್ಪು ನಾಯ ಹಿರೇಗುತ್ತಿ ಬೊಮ್ಮಯ್ಯ ಪಟಗಾರ .ತುಕಾರಾಮ ನಾಯ್ಕ. ಶೇಖರ ಹರಿಕಂತ್ರ. ಶೇಖರ ಗಾವಡಿ. ದುರ್ಗಾಂಬ ಯುವಕ ಸಂಘದ ಪದಾಧಿಕಾರಿಗಳು. ಊರಿನ ಅನೇಕರು ಭಾಗವಹಿಸಿ ಕಂಬನಿ ಮಿಡಿದಿದ್ದಾರೆ.