ಅಂಕೋಲಾ : ರಾ.ಹೆ 66 ರ ಬಾಳೆಗುಳಿ ವರದರಾಜ ಹೊಟೇಲ್ ಹತ್ತಿರ ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರನಲ್ಲಿದ್ದ ನಾಲ್ವರು ದುರ್ಮರಣ ಹೊಂದಿದ ಬಗ್ಗೆ ವರದಿಯಾಗಿದೆ. ತಮಿಳುನಾಡು ಮೂಲದವರು ಎನ್ನಲಾದ ಇವರು ಬಾಳೇ ಗುಳಿ ಯಿಂದ ಅಂಕೋಲಾ ಕಡೆಗೆ ಕಾರಿನಲ್ಲಿ ಹೊರಟಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ದಾಟಿ ವಿರುದ್ಧ ದಿಕ್ಕಿಗೆ ಜೋರಾಗಿ ಬಂದು , ಅಂಕೋಲಾ ಕಡೆಯಿಂದ ಯಲ್ಲಾಪುರ ಹುಬ್ಬಳ್ಳಿ ಮಾರ್ಗವಾಗಿ- ನವಲಗುಂದಕ್ಕೆ ಹೊರಟಿದ್ದ ಸಾರಿಗೆ ಬಸ್ ಗೆ ಜೋರಾಗಿ ಗುದ್ದಿಕೊಂಡಿದ್ದು, ಕಾರು ಸಂಪೂರ್ಣ ಜಖಂ ಗೊಂಡು ನುಜ್ಜು ಗುಜ್ಜಾಗಿದೆ.

RELATED ARTICLES  ನಂಬಿಕೆ ಜೀವನಕ್ಕೆ ಅಮೃತ ಇದ್ದಂತೆ: ರಾಘವೇಶ್ವರ ಶ್ರೀ

ಘಟನಾ ಸ್ಥಳದಲ್ಲಿ ಇಬ್ಬರು ಸಿಡಿದು ಬಿದ್ದು ಮೃತಪಟ್ಟಿದ್ದಾರೆ. ಬದುಕುಳಿದಿರ ಬಹುದೆಂದು ಕಾರನಲ್ಲಿದ್ದ ಒರ್ವನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅವರು ಕೊನೆಯುಸಿರೆಳೆದಿದ್ದಾರೆ. ಕಾರನಲ್ಲಿ ಡ್ರೈವಿಂಗ್ ಸೀಟ್ ಎಡ ಪಕ್ಕದಲ್ಲಿ ಕುಳಿತಿದ್ದ ಇನ್ನೋರ್ವ ನುಜ್ಜು ಗುಜ್ಜಾದ ಕಾರ್ ನಲ್ಲಿ ಸಿಲುಕಿ ಮೃತ ಪಟ್ಟಿದ್ದಾರೆ. ಕಬ್ಬಿಣದ ಸಲಾಕೆ ಬಳಸಿ ಡೋರ್ ಓಪನ್ ಮಾಡಿ ದೇಹ ಹೊರತೆಗೆಯಲಾಗಿದೆ.

RELATED ARTICLES  ಧಾರವಾಡಿ ಎಮ್ಮೆಗೂ ತಳಿಯ ಮಾನ್ಯತೆ..!! ಎಮ್ಮೆ ನಿನಗೆ ಸಾಟಿಯೇ ಇಲ್ಲ..!

ಘಟನಾ ಸ್ಥಳಕ್ಕೆ ಪೋಲೀಸ್ ಇಲಾಖೆಯ ಹಿರಿ- ಕಿರಿಯ ಅಧಿಕಾರಿಗಳು , 112 ಸಿಬ್ಬಂದಿಗಳು, ಐ ಆರ್ ಬಿ ಸಿಬ್ಬಂದಿಗಳು ಹಾಜರಾಗಿ ಸ್ಥಳೀಯರ ಸಹಕಾರದಲ್ಲಿ ಮೃತ ದೇಹಗಳನ್ನು ಸಾಗಿಸಲು ಮತ್ತು ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.