ಕಾರವಾರ : ಹೊಸ ವರ್ಷ ಪ್ರಾರಂಭದಲ್ಲಿಯೇ ಭಯಾನಕ ಘಟನಾವಳಿಗಳು ನಡೆದಿದ್ದು, ನಗರದ ಬಿಣಗಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಸ್ ವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಹೊಸ ವರ್ಷದ ಹಿನ್ನಲೆಯಲ್ಲಿ ಬಟ್ಟೆ ಖರೀದಿಗೆ ಬೈಕ್ ಮೇಲೆ ನಗರಕ್ಕೆ ತೆರಳಲು ಮುಖ್ಯ ರಸ್ತೆ ದಾಟಿ ಮುಂದೆ ಚಲಿಸುತ್ತಿದ್ದ ತಂದೆ ಮಗಳಿಗೆ ಹಿಂಭಾಗದಿoದ ಖಾಸಗಿ ಬಸ್ ಡಿಕ್ಕಿ ಹೊಡೆದು ಬಾಲಕಿ ಮೃತಪಟ್ಟ ಘಟನೆ ನಡೆದಿದೆ.

RELATED ARTICLES  ಕುಮಟಾ ಹೊನ್ನಾವರದಲ್ಲಿ‌ ಕಾಂಗ್ರೆಸ್ ನಿಂದ ನಡೆದಿದೆ ಚುನಾವಣಾ ರಣತಂತ್ರ.

ಲವಿತಾ ಜಾರ್ಜ ಪರ್ನಾಂಡಿಸ್ (13)ಸಾವು ಕಂಡ ಬಾಲಕಿ ಎಂದು ತಿಳಿದುಬಂದಿದೆ. ಮೃತ ಬಾಲಕಿಯ ತಂದೆ, ಸ್ಕೂಟಿ ಚಲಾಯಿಸುತ್ತಿದ್ದ ಜಾರ್ಜ್ ಪರ್ನಾಂಡಿಸ್ ಗಾಯಗೊಂಡಿದ್ದು, ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರಗೆ ದಾಖಲಿಸಲಾಗಿದೆ. ಖಾಸಗಿ ಬಸ್ ಚಾಲಕನನ್ನು ಕಾರವಾರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರವಾರ ಸಂಚಾರಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

RELATED ARTICLES  ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದೆ ಕುಮಟಾ ಪುರಸಭೆ: ನಡೆದಿದೆ ಭರ್ಜರಿ ತಯಾರಿ.