ಅಂಕೋಲಾ : ವಿಷ ಪದಾರ್ಥಗಳನ್ನು ಸೇವಿಸಿ ಆಂಧ್ರ ಪ್ರದೇಶ ಗುಂಟೂರು ಜಿಲ್ಲೆಯ ತಂದೆ ಮಗ ದಾರಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಗಂಗರಾಜು ವೆಕಂಟ ನಾಗಾ ನರಸಿಂಹ ರಾಘವ ದಿನಕರ ( 41) ಮತ್ತು ಪುತ್ರ ಗಂಗರಾಜು ವ್ಯಾಗ್ರೇಶ್ವರ ಕಾರ್ತಿಕೇಯ ತರುಣ (15) ಮೃತ ದುರ್ದೈವಿಗಳು. ಇವರು ತನ್ನ ಸಹೋದರಿ ಪದ್ಮಜಾರವರ ಆಂಧ್ರ ಪ್ರದೇಶದ ಮನೆಯಲ್ಲಿ ವಾಸವಿದ್ದರು. ಡಿ 14 ರಂದು ಹೈದ್ರಾಬಾದ್‌ನಲ್ಲಿ ಅಡುಗೆ ಕೆಲಸ ಸಿಕ್ಕಿದ್ದು, ತನ್ನ ಮಗನನ್ನು ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಹೊದವ ನೇರವಾಗಿ ಗೋಕರ್ಣ ಕಡೆಗೆ ಬಂದಿದ್ದು, ಯಾವುದೊ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ತಂದೆ ಮತ್ತು ಮಗ ಇಬ್ಬರೂ ಸೇರಿ ವಿಷ ಪದಾರ್ಥವನ್ನು ಸೇವಿಸಿ, ಡಿ. 24ರಂದು ಗೋಕರ್ಣದಿಂದ ಅಂಕೋಲಾ ಮೂಲಕ ಬಸ್ಸನಲ್ಲಿ ಹೋಗುತ್ತಿದ್ದಾಗ ಸಂಜೆ 6 ಗಂಟೆಯ ಸುಮಾರಿಗೆ ಅಂಕೋಲಾದ ಬಸ್ ನಿಲ್ದಾಣದ ಹತ್ತಿರ ಇಬ್ಬರೂ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣ ಅವರಿಗೆ ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿಂದ ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು.

RELATED ARTICLES  ಕಂದಾಯ ಅಧಿಕಾರಿ ವಿನಾಯಕ ಭಟ್ಟ ಇನ್ನಿಲ್ಲ : ಕಾರಿನಲ್ಲಿ ಕುಳಿತಲ್ಲೇ ಸಾವು.

ಹುಬ್ಬಳ್ಳಿಯಲ್ಲಿಯೂ ತಂದೆ ಮಗನಿಗೆ ಚಿಕಿತ್ಸೆ ಫಲಕಾರಿಯಾಗದೆ ತಂದೆ, ಮಗ ಮೃತ ಪಟ್ಟಿದ್ದಾರೆ. ಮೃತನ ಸಹೋದರಿ ಆಚ್ಚಂಟ ಪದ್ಮಜಾ ಅಂಕೋಲಾ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಉತ್ತರಕನ್ನಡದ ಉಸ್ತುವಾರಿ ಸಚಿವರ ಬದಲಾವಣೆ…!

Source : Udayavani.