ಕುಮಟಾ: ಕರ್ನಾಟಕ ರಾಜ್ಯ ಬೋಧಕರ ಸಂಘವು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ತೊರ್ಕೆಯ ಕವರಿ ಪ್ರತಿಷ್ಟಾನದ ಸಹಯೋಗದಲ್ಲಿ ಸ್ವಾತಂತ್ರö್ಯ್ರದ ಅಮೃತ ಮಹೋತ್ಸವದ ಅಂಗವಾಗಿ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ‘ನನ್ನ ಭಾರತ- ನನ್ನ ಹೆಮ್ಮೆ’ ಎಂಬ ವಿಷಯದ ಕುರಿತಾದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲಿನ ಕಾಂತಿ ಶಂಕರ ಹೆಗಡೆ ಹಾಗೂ ಅಂಕೋಲಾ ತಾಲ್ಲೂಕಿನ ಅಚವೆಯ ಸರ್ಕಾರಿ ಪ್ರೌಢಶಾಲೆಯ ಪ್ರೀತಿ ಮಂಜುನಾಥ ನಾಯಕರವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.


ಕುಮಟಾ ತಾಲ್ಲೂಕಿನ ಮಿರ್ಜಾನಿನ ಜನತಾ ವಿದ್ಯಾಲಯದ ಭಾವನಾ ಕೃಷ್ಣ ಭಟ್ ಹಾಗೂ ಭಟ್ಕಳ ತಾಲ್ಲೂಕಿನ ಬಂದರದ ಸರ್ಕಾರಿ ಪ್ರೌಢ ಶಾಲೆಯ ಸಂಜಯ ಮಂಜುನಾಥ ನಾಯ್ಕರವರು ಕ್ರಮವಾಗಿ ಜಿಲ್ಲೆಗೆ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.


ಕಾರವಾರ ತಾಲ್ಲೂಕಿನ ಸದಾಶಿವಗಡದ ಅಮೃತ ವಿದ್ಯಾಲಯದ ಸಚ್ಚಿದಾನಂದ ದುರ್ಗೇಕರ, ಕಾರವಾರ ಶಹರದ ಸೇಂಟ್ ಮೈಕಲ್ ಕಾನ್ವೆಂಟಿನ ಐಶ್ವರ್ಯ ಹಾಲುಂಡಿ, ಬಾಲಮಂದಿರದ ಶಿವಾನಿ ರಾಯ್ಕರ್, ಅಂಕೋಲಾ ತಾಲ್ಲೂಕಿನ ಅವರ್ಸಾದ ಕಾತ್ಯಾಯಿನಿ ಪ್ರೌಢ ಶಾಲೆಯ ನಿಶ್ಚಿತಾ ನಾಯ್ಕ, ಅಗಸೂರಿನ ಕರ್ನಾಟಕ ಪಬ್ಲಿಕ್ ಸ್ಕೂಲಿನ ಹರ್ಷದ್ ನಾಯಕ, ಬೆಳಸೆಯ ಕಿತ್ತೂರು ರಾಣಿ ಚೆನ್ನಮ್ಮಾ ವಸತಿ ಶಾಲೆಯ ವಜ್ರಾ ಎಸ್.ಎ. , ಕುಮಟಾ ತಾಲ್ಲೂಕಿನ ಊರಕೇರಿಯ ರಾಮನಾಥ ಪ್ರೌಢ ಶಾಲೆಯ ಶೃತಿ ಜಗದೀಶ ಪಟಗಾರ, ಕುಮಟಾ ಶಹರದ ಗಿಬ್ ಪ್ರೌಢ ಶಾಲೆಯ ಶುಭಂ ಭಂಡಾರಿ, ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಸ್ನೇಹಾ ಗಾಂವಕರ, ಹೊನ್ನಾವರ ತಾಲ್ಲೂಕಿನ ಕರ್ಕಿಯ ಜ್ಙಾನೇಶ್ವರಿ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಕೀರ್ತಿಕಾ ಶೇಟ್, ಪ್ರಭಾತ ನಗರದ ಸರ್ಕಾರಿ ಪ್ರೌಢ ಶಾಲೆಯ ಪ್ರೀತಿ ಪ್ರಭು, ಮಂಕಿ- ಮಾವಿನಕಟ್ಟಾದ ಅಸ್ಸಿಸಿ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಶ್ರೇಜಾ ಉದಯ ನಾಯ್ಕ ಹಾಗೂ ಭಟ್ಕಳ ತಾಲ್ಲೂಕಿನ ಮುಂಡಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಆಶ್ರಿತಾ ನರಸಿಂಹ ನಾಯ್ಕ, ತೆಂಗಿನಗುAಡಿಯ ಸರ್ಕಾರಿ ಪ್ರೌಢ ಶಾಲೆಯ ವಿನುತಾ ಮೊಗೇರ ಮತ್ತು ಮುರುಡೇಶ್ವರದ ಜನತಾ ವಿದ್ಯಾಲಯದ ನಮೃತಾ ನಾಯ್ಕರವರು ಕ್ರಮವಾಗಿ ತಾಲ್ಲೂಕಿಗೆ ಮೊದಲ ಮೂರು ಸ್ಥಾನಗಳನ್ನು ಪಡೆದಿರುತ್ತಾರೆ.
ಜಿಲ್ಲಾ ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ.೧೦೦೦/-, ರೂ.೯೦೦/-, ರೂ.೮೦೦/- ಹಾಗೂ ತಾಲ್ಲೂಕಾ ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ.೭೦೦/-, ರೂ. ೬೦೦/- ಹಾಗೂ ರೂ. ೫೦೦/- ನಗದಿನೊಂದಿಗೆ ಪ್ರಶಸ್ತಿ ಪತ್ರ, ಶಾಲು ಹಾಗೂ ಪುಸ್ತಕ ಬಹುಮಾನಗಳೊಂದಿಗೆ ದಿನಾಂಕ ೨೬-೦೧-೨೦೨೩ ರ ಗಣರಾಜ್ಯೋತ್ಸವದಂದು ಮಧ್ಯಾಹ್ನ ೨-೩೦ ಗಂಟೆಗೆ ಕುಮಟಾದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾಭವನದಲ್ಲಿ ಪುರಸ್ಕರಿಸಲಾಗುವುದು.

RELATED ARTICLES  ಹಾಲಕ್ಕಿ ಸಮುದಾಯ ಭವನಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ನೀಡುವ ಘೋಷಣೆಮಾಡಿದ ಶಾಸಕ ದಿನಕರ ಶೆಟ್ಟಿ.


ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ ಬರ್ಗಿಯವರು ಪುರಸ್ಕಾರ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು, ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಈಶ್ವರ ನಾಯ್ಕರವರು ಬಹುಮಾನವನ್ನು ವಿತರಿಸಲಿದ್ದು, ಬಹುಮಾನ ಪ್ರಾಯೋಜಕರಾದ ಕವರಿ ಪ್ರತಿಷ್ಠಾನದ ಅಧ್ಯಕ್ಷರಾದ ಆನಂದು ಕವರಿ, ಕರಾವಳಿ ಮುಂಜಾವು ದಿನ ಪತ್ರಿಕೆಯ ವರದಿಗಾರ ನಾಗರಾಜ ಪಟಗಾರ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಹಾಗೂ ಎಲ್ಲ ಕ್ಷೇತ್ರ ಸಮನ್ವಯಾಧಿಕಾರಿಗಳು ಅಭ್ಯಾಗತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಸ್.ಪೈ, ಸಂಚಾಲಕರಾದ ವಿಜಯಕುಮಾರ ನಾಯ್ಕ ಹಾಗೂ ಕೋಶಾಧ್ಯಕ್ಷರಾದ ಶಿವಚಂದ್ರರವರು ಜಂಟಿಯಾಗಿ ತಿಳಿಸಿದ್ದಾರೆ.

RELATED ARTICLES  ಉಚಿತ ಆರೋಗ್ಯ ತಪಾಸಣಾ ಶಿಬಿರ