ಕುಮಟಾ : ವಿದ್ಯಾರ್ಥಿಗಳಿಗೆ ಬಾಳಲ್ಲಿ ಜ್ಞಾನ ಎಷ್ಟು ಮುಖ್ಯವೋ ಸಂಸ್ಕಾರ ಅದಕ್ಕಿಂತಲೂ ಮುಖ್ಯ. ತಂದೆ ತಾಯಿಯ ಋಣಕ್ಕೆ ತಲೆಬಾಗಿ ಬಾಳುವ ಅರಿವನ್ನು ಶಾಲೆ ಕಾಲೇಜು ದಿನಗಳಲ್ಲಿ ಮಕ್ಕಳು ಕಲಿಯಬೇಕು. ಈ ದಿಶೆಯಲ್ಲಿ ಹಿರೇಗುತ್ತಿ ಕಾಲೇಜು ಸಂಸ್ಕಾರಯುತ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಎಂದು ಇತ್ತೀಚೆಗೆ ನಡೆದ ಸರಕಾರಿ ಪದವಿಪೂರ್ವ ಕಾಲೇಜು ಹಿರೇಗುತ್ತಿಯ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಸಿದ್ಧಿವಿನಾಯಕ ದೇವಸ್ಥಾನ ಮಾದನಗೇರಿಯ ಧರ್ಮದರ್ಶಿಗಳಾದ ಶ್ರೀ ಸುನಿಲ್ ಪೈ ಅಭಿಪ್ರಾಯಪಟ್ಟರು. ಅಭ್ಯಾಗತರಾದ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀ ಸತೀಶ.ಬಿ.ನಾಯ್ಕ ವಿದ್ಯಾರ್ಥಿಗಳ ಶಿಸ್ತು ಮತ್ತು ಕಾಲೇಜಿನ ಅಚ್ಚುಕಟ್ಟುತನವನ್ನು ಮನಸಾರೆ ಮೆಚ್ಚಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸತೀಶ್ ನಾಯ್ಕರವರಿಗೆ ಕಾಲೇಜಿನ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.

RELATED ARTICLES  ಅಮೃತ ಮಹೋತ್ಸವದ ಸಂದರ್ಭದಲ್ಲಿ ನಡೆದ ಗುರುವಂದನಾ ಸಮಾರಂಭ.

ಅತಿಥಿಗಳಾದ ವಿಶ್ರಾಂತ ಪ್ರಾಚಾರ್ಯ ಶ್ರೀ ಪ್ರೇಮಾನಂದ ಗಾಂವಕರ ರವರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಯಶಸ್ಸಿನ ಸೂತ್ರಗಳನ್ನು ವಿವರಿಸಿ ಸ್ಪೂರ್ತಿ ತುಂಬಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅರುಣ ಹೆಗಡೆಯವರು ಕಾಲೇಜಿನ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತ ಎಲ್ಲರನ್ನು ಕೃತಜ್ಞತೆಯಿಂದ ಸ್ಮರಿಸಿದರು. ವೇದಿಕೆಯಲ್ಲಿ ಹಿರೇಗುತ್ತಿ ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀ ರೋಹಿದಾಸ ಗಾಂವಕರ . ದಾನಿಗಳಾದ ಶ್ರೀ ಬೊಮ್ಮಯ್ಯ ವೆಂಕಟ್ರಮಣ ನಾಯಕ ಬೊಮ್ಮನ್ ಹಿರೇಗುತ್ತಿ. ಶ್ರೀ ದೇವರಾಯ ಉದ್ದಂಡ ನಾಯಕ ಬೊಮ್ಮನ್ ಹಿರೇಗುತ್ತಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಶ್ರೀ ಷ ಬ್ರ ಅಭಿನವ ಸಿದ್ಧಲಿಂಗ ಶಿವಾಚಾರ್ಯರಿಗೆ ಸಂದ ಗೋಕರ್ಣ ಗೌರವ.

ಹಿರಿಯ ಉಪನ್ಯಾಸಕ ಶ್ರೀ ನಾಗರಾಜ ಗಾಂವಕರ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಶ್ರೀ ರಮೇಶ ಗೌಡ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಉಪನ್ಯಾಸಕಿ ಸೀಮಾ ಪಟಗಾರ ವಂದಿಸಿದರು.

ಉಪನ್ಯಾಸಕಿಯರಾದ ಶ್ರೀಮತಿ ಶಾರದಾ ನಾಯಕ ವರದಿ ವಾಚಿಸಿದರು. ಶ್ರೀಮತಿ ಸುಜಾತಾ ನಾಯಕ ಮತ್ತು ಶ್ರೀಮತಿ ನೇತ್ರಾವತಿ ನಾಯಕ ದತ್ತಿನಿಧಿ. ಸಾಂಸ್ಕ್ರತಿಕ ಮತ್ತು ಕ್ರೀಡಾ ಬಹುಮಾನ ವಿತರಣೆಯನ್ನು ನಿರ್ವಹಿಸಿದರು. ದೀಕ್ಷಾ ಸಂಗಡಿಗರು ಪ್ರಾರ್ಥಿಸಿ ಸ್ವಾಗತಗೀತೆ ಹಾಡಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕವಾದ ಮನರಂಜನಾ ಕಾರ್ಯಕ್ರಮಗಳು ನೆರವೇರಿದವು.