ಅಂಕೋಲಾ : ತಾಲೂಕಿನಲ್ಲಿ ಹಾದುಹೋದ ರಾ.ಹೆ 66ರ ಅಂಚಿನ ಬಾರ್ ಮತ್ತು ಕಟ್ಟಿಗೆ ಮಿಲ್ ಸಮೀಪ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಲಕ್ಷಾಂತರ ರೂ ಮೌಲ್ಯದ ಕಿರಾಣಿ ಸಾಮಾನುಗಳು ಸುಟ್ಟು ಕರಕಲಾದ ಘಟನೆ ಹೋಲ್ ಸೇಲ್ ಕಿರಾಣಿ ಅಂಗಡಿಯಲ್ಲಿ ಸಂಭವಿಸಿದೆ. ಚಂದ್ರಿಕಾ ಪ್ರೊವಿಸನ್ ಸ್ಟೋರ್ಸ್ ಎನ್ನುವುದು ತಾಲೂಕಿನ ಪ್ರಖ್ಯಾತ ಹೋಲ್ ಸೇಲ್ ಮತ್ತು ರಿಟೇಲ್ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದೆ.
ದೊಡ್ಡ ಪ್ರಮಾಣದ ಈ ಅಂಗಡಿ ಮತ್ತು ಹೊಂದಿಕೊಂಡಿರುವ ಹಿಂಬದಿ ಗೋಡನ್ ನಲ್ಲಿ ದಾಸ್ತಾನು ಇಡಲಾದ ಸಾಮಾನುಗಳೆಲ್ಲ ಬಹುತೇಕ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ ಎನ್ನಲಾಗಿದ್ದು, ಲಕ್ಷಾಂತರ ಮೌಲ್ಯದಿಂದ ಕೋಟಿ ರೂ ಮೌಲ್ಯದ ವರೆಗೆ ಹಾನಿ ಸಂಭವಿಸಿರುವ ಸಾಧ್ಯತೆ ಕೇಳಿ ಬಂದಿದೆ.

RELATED ARTICLES  ಮಳೆಯ ಅವಾಂತರ: ಸಿದ್ಧಾಪುರದಲ್ಲಿ ಗುಡ್ಡ ಕುಸಿತ, ಧರೆಗುರುಳಿದವು ಮರಗಳು

ಅದಾವುದೋ ಕಾರಣದಿಂದ ಅಂಗಡಿ ಒಳಗಿಂದ ಒಳಗೆ ಬೆಂಕಿ ಕಾಣಿಸಿಕೊಂಡು ಮಧ್ಯರಾತ್ರಿ ವೇಳೆ ದಾಸ್ತಾನು ಕೊಠಡಿ ಹಾಗೂ ಸಾಮಾಗ್ರಿಗಳಿಗೆ ಹೊತ್ತಿ ಉರಿದಿರುವ ಸಾಧ್ಯತೆ ಕೇಳಿ ಬಂದಿದ್ದು, ತಗಡಿನ ಮೇಲ್ಚಾವಣಿ ಇರುವುದರಿಂದ ಒಮ್ಮೇಲೆ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಒಳಗಡೆಯಿಂದ ಚಟ ಪಟ ಸದ್ದು ಕೇಳಿ ಬರಲಾರ೦ಭಿಸಿದಂತೆ ಹತ್ತಿರದಲ್ಲೇ ಇದ್ದ ವಾಚಮನ್ ಓರ್ವ ಕಳ್ಳರಿರಬಹುದೇ ಎಂದು ನೋಡಲು ಹೋದಾಗ ಬೆಂಕಿ ಅವಘಡ ವಾಗಿರುವುದು ಗಮನಕ್ಕೆ ಬಂದು, ಪಕ್ಕದ ಬಾರ್ ಕೆಲಸಗಾರರು ಮತ್ತು ತಮ್ಮ ಮಾಲಕರಿಗೆ ವಿಷಯ ತಿಳಿಸಿದರು ಎನ್ನಲಾಗಿದೆ.

RELATED ARTICLES  ಮಕ್ಕಳನ್ನು ಶಾಲೆಗೆ ಆಕರ್ಷಿಸುವ ಹೊಸ ಪ್ರಯತ್ನ: ಮಾದರಿಯಾಯ್ತು ರೈಲು ಭೋಗಿ ಹೋಲುವ ಶಾಲೆ.

ಅಗ್ನಿ ಶಾಮಕ ದಳದವರು ಎರಡು ವಾಹನಗಳಲ್ಲಿ ಆಗಮಿಸಿ ತಡ ರಾತ್ರಿಯಿಂದ ಬೆಳಗಿನ ವರೆಗೆ ನಿರಂತರ ಕಾರ್ಯಾಚರಣೆ ನಡೆಸಿ ತಮ್ಮ ವಾಹನಕ್ಕೆ 6 ಕ್ಕೂ ಹೆಚ್ಚು ಬಾರಿ ನೀರು ತುಂಬಿಕೊಂಡು, ಅಗ್ನಿ ಶಮನಕ್ಕೆ ಕರ್ತವ್ಯ ನಿರ್ವಹಿಸಿದರು. ಇದೇ ವೇಳೆ ಹೆಸ್ಕಾಂ ಸಿಬ್ಬಂದಿಗಳು ಆಗಮಿಸಿ ಕೆಲ ಮುಂಜಾಗೃತಾ ಕ್ರಮ ಕೈಗೊಂಡರು.