ಮ್ರಿಕಾನ್‌ನ BF.7 ವೇರಿಯಂಟ್ ಗದ್ದಲದ ಬೆನ್ನಿಗೇ ದೇಶದಲ್ಲಿ XBB.1.5 ಎಂಬ ಹೊಸ ರೂಪಾಂತರ ಪತ್ತೆಯಾಗಿದೆ. ಅಮೆರಿಕ, ಇಂಗ್ಲೆಂಡ್‌ನಲ್ಲಿ ಕೊವೀಡ್ ಅಲೆಗೆ ಕಾರಣವಾದ XBB 1.5 ಭಾರತಕ್ಕೂ ಕಾಲಿಟ್ಟಿದ್ದು, ಇದುವರೆಗೆ ಒಟ್ಟು ಐದು ಪ್ರಕರಣಗಳು ವರದಿಯಾಗಿವೆ ಎಂದು ಇನ್ಫಾಕಾಗ್ ಮಾಹಿತಿ ನೀಡಿದೆ.
ಒಮಿಕ್ರಾನ್ XBB.1.5 ಲಸಿಕೆ ಹಾಕಿದವರಿಗೂ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿದೆ. ಸಧ್ಯ ಗುಜರಾತ್‌ನಲ್ಲಿ 3, ಕರ್ನಾಟಕ ಹಾಗೂ ರಾಜಸ್ಥಾನದಲ್ಲಿ ತಲಾ 1 ಪ್ರಕರಣಗಳಾಗಿ ಸಕ್ರೀಯವಾಗಿವೆ. ಇದು ದೇಶದಲ್ಲಿ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದಾರೆ.