ಕುಮಟಾ ; ಬೆಂಕಿಯೊಂದಿಗೆ ಸರಸವಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಬಿಸಿ ಬಿಸಿ ಎಣ್ಣೆಯಲ್ಲಿ ಕೈ ಹಾಕಿ ಬರಿಗೈಲಿ ಒಡೆ ತೆಗೆಯುವುದನ್ನು ಊಹಿಸಿಕೊಂಡರೂ ಮೈ ಝುಮ್ಮೆನ್ನುತ್ತೆ. ಆದ್ರೆ ಈ ಅಸಾಧ್ಯವನ್ನು ಸಾಧ್ಯವಾಗಿಸುವ, ಕುದಿಯುತ್ತಿರುವ ಎಣ್ಣೆಯಲ್ಲಿ ವಡೆತೆಗೆಯುವ ವಿಸ್ಮಯಕಾರಿ ಘಟನೆ ನಡೆಯೋದು ಕುಮಟಾದ ಕಾಮಾಕ್ಷಿ ದೇವಿಯ ಸನ್ನಿಧಿಯಲ್ಲಿ..

ಕುದಿಯುತ್ತಿರುವ ಎಣ್ಣೆಯಲ್ಲಿ ವಡೆಯನ್ನು ತೆಗೆಯವುದು ಯಾವುದೇ ಮ್ಯಾಜಿಕ್ ಅಲ್ಲ. ಇದು ದೇವರ ಪವಾಡ ಎಂಬುದು ಭಕ್ತರ ಬಲವಾದ ನಂಬಿಕೆ. ಈ ನಂಬಿಕೆಯಿಂದಾಗೇ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸಿ, ಕುದಿಯುವ ಎಣ್ಣೆಯಿಂದ ವಡೆಯನ್ನು ತೆಗೆದು ದೇವಿಗೆ ಅರ್ಪಿಸುತ್ತಿದ್ದಾರೆ.

RELATED ARTICLES  ನಿವೇದಿತ ಆಳ್ವಾ ನಾಮಪತ್ರ ಸಲ್ಲಿಕೆ ನಾಳೆ

ಹೌದು, ಕುಮಟಾ ತಾಲೂಕಿನ ಪಟ್ಟಣದ ಮಧ್ಯೆ ಇರುವ ಗುಜರಗಲ್ಲಿಯ ಕಾಮಾಕ್ಷಿ ದೇವಾಲಯದಲ್ಲಿ ಎಣ್ಣೆಯಲ್ಲಿ ಒಡೆ ತೆಗೆಯುವ ಮೂಲಕ ತಮ್ಮ ಭಕ್ತಿ ಭಾವ ಮೆರೆದರು. ಇಲ್ಲಿ ವರ್ಷದ ಆಶ್ವಿಜ ಶುದ್ಧ ಹುಣ್ಣಿಮೆ ದಿನದಂದು ಈ ವಡೆ ಸೇವೆಯನ್ನು ನಡೆಸಲಾಗುತ್ತೆ. ಅನೇಕ ವರ್ಷಗಳಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪದ್ಧತಿಯಂತೆ ಇಲ್ಲಿ ಈ ಸೇವೆಯನ್ನು ನಡೆದುಕೊಂಡು ಬರಲಾಗಿದೆ. ವಡೆ ತೆಗೆಯುವ ಸಂಪ್ರದಾಯದ ಅಂಗವಾಗಿ ದೇವಿಗೆ ವಿಶೇಷ ಅಂಲಕಾಂರ, ವಿಶೆಷ ಪೂಜೆ ಪುನಸ್ಕಾರ ಸೇವೆಗಳು ನಡೆದವು. ಅದರಂತೆ ತಾಯಿ ಕಾಮಾಕ್ಷಿ ಸ್ಪೂರದ್ರೂಪಿಯಾಗಿ ಕೈಯಲ್ಲಿ ಖಡ್ಗ ಹಿಡಿದು ದುಷ್ಠರ ಸಂಹಾರ ಮಾಡಿ ಕಣ್ಣಲ್ಲಿ ವಿಜಯದ ಕಳೆಯನ್ನು ತುಂಬಿಕೊಂಡು ಲೋಕೊದ್ಧಾರಕ್ಕೆ ಅವತರಿಸಿದಂತೆ ಸರ್ವಲಂಕಾರ ಭೂಷಿತಳಾಗಿ ಭಕ್ತರ ಕಣ್ಮನ ಸಳೆಯುವಂತಿದ್ದಳು..

RELATED ARTICLES  ಜೆಡಿಎಸ್ ತನ್ನ ಸ್ವಂತ ಶಕ್ತಿಯ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ.

ದೇವಿಗೆ ಒಂದಡೆ ಪೂಜೆ ನಡೆಯುತ್ತಿದ್ದರೆ, ಇನ್ನೊಂದಡೆ ದೇವಿಯ ಅನುಗ್ರಹದಿಂದ ಅನೇಕ ಭಕ್ತರು ತಾಯಿಯ ಶಕ್ತಿ ಸಂಚಲನಗೊಂಡತೆ ಕುಣಿಯುವ ದೃಶ್ಯ ಕಂಡುಬಂತು. ಆದರೆ ದೇವಾಲಯಕ್ಕೆ ಬಂದವರಲ್ಲಿ ಅಚ್ಚಳೆಯದೆ ಉಳಿಯುವುದು ಎಂದರೆ ನೋಡ ನೋಡುತ್ತಲೆ ಬಿಸಿಎಣ್ಣೆಯಲ್ಲಿ ಬರಿಗೈಲಿ ವಡೆ ತೆಗೆಯವುದು.