ಭಟ್ಕಳ : ಉತ್ತರಕನ್ನಡದಲ್ಲಿ ಮತ್ತೆ ಚಿರತೆ ಹಾವಳಿಯ ಬಗ್ಗೆ ವರದಿಯಾಗುತ್ತಿದೆ. ವ್ಯಕ್ತಿಯೊರ್ವರ ಮೇಲೆ ಚಿರತೆ ದಾಳಿ ನಡೆಸಿದ್ದು ಗಾಯಗೊಂಡ ವ್ಯಕ್ತಿಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ತಾಲೂಕಿನ ನೂಜ್ ಕೆಕ್ಕೋಡಿನಲ್ಲಿ ನಡೆದಿದೆ. ಸದ್ಯ ವ್ಯಕ್ತಿ ಚಿರತೆಯ ದಾಳಿಯಿಂದ ಪಾರಾಗಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ನೂಜ್ ಕೆಕ್ಕೋಡ ನಿವಾಸಿ ದುರ್ಗು ಮರಾಠಿ(37) ಚಿರತೆಯ ದಾಳಿಗೆ ಒಳಗಾದ ವ್ಯಕ್ತಿ. ಇವರು ತಮ್ಮ ಮನೆಯ ಜಗುಲಿಯಲ್ಲಿ ಮಲಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ದುರ್ಗು ಮರಾಠಿ ಅವರ ಕೈ ಗಾಯಗೊಳಿಸಿದೆ. ವ್ಯಕ್ತಿಯು ಚಿರಿ ಕೊಂಡಿದ್ದು ಜನರು ಬರುತ್ತಿರುವಂತೆ ಚಿರತೆ ಪರಾರಿಯಾಗಿದೆ ಎನ್ನಲಾಗಿದೆ.
ಚಿರತೆಯ ದಾಳಿಯಿಂದ ನೂಜ್ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಆರ್‌ಎಫ್‌ಒ ಶರತ್ ಶೆಟ್ಟಿ ಬೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಗಾಯಗೊಂಡ ವ್ಯಕ್ತಿಗೆ ಸರ್ಕಾರದ ವತಿಯಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.