ಶಿರಸಿ: ತಾಲೂಕಿನ ಶಾಲ್ಮಲಾ ನದಿ ದಂಡೆಯ ಸಹಸ್ರಲಿಂಗದಲ್ಲಿ ದಂಪತಿಗಳು ಬಿರಿಯಾನಿ ಸೇವಿಸಿದ್ದು, ಇದು ಶಿರಸಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸಹಸ್ರಲಿಂಗದಲ್ಲಿ ಸಾವಿರಾರು ಲಿಂಗಗಳಿವೆ. ಇದು ಹಿಂದೂಗಳ ಧಾರ್ಮಿಕ ತಾಣವೂ ಆಗಿದೆ. ಆದರೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಪಾವಿತ್ರ್ಯತೆಯನ್ನ ಹಾಳು ಮಾಡುತ್ತಿದ್ದಾರೆ. ಇತ್ತೀಚಿಗೆ ಅನ್ಯ ಕೋಮಿನ ದಂಪತಿ ಇಲ್ಲಿ ಕುಳಿತು ಬಿರಿಯಾನಿ ಸೇವಿಸಿದ್ದರು. ಅದನ್ನ ಮಹಿಳೆಯೊಬ್ಬರು ಪ್ರಶ್ನಿಸಿದ್ದಾರೆ.
ಮಹಿಳೆಯೊಬ್ಬರು ನೀವಿಲ್ಲಿ ಬಿರಿಯಾನಿ ತಿನ್ನುತ್ತಿದ್ದೀರಾ? ಎಂದು ಪ್ರಶ್ನಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ದಂಪತಿಯ ನಡೆಗೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವವರು ಯಾವುದೇ ಧರ್ಮದವರಾಗಿದ್ದರೂ ಅವರನ್ನ ಪ್ರಶ್ನಿಸಬೇಕು ಎಂದು ಹಲವು ನೆಟ್ಟಿಗರು ಪೋಸ್ಟ್‌ಗಳಿಗೆ ಕಮೆಂಟ್ ಮಾಡಿದ್ದಾರೆ.