ಕಾರವಾರ : ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ BSNL ದೂರವಾಣಿ ಸಲಹಾ ಸಮಿತಿ ಸಭೆಯು ಸಂಸದರಾಗಿರುವ ಮಾನ್ಯ ಅನಂತಕುಮಾರ ಹೆಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಧಾನಸಭಾ ಸದಸ್ಯರುಗಳಾದ ಮಾನ್ಯ ದಿನಕರ ಶೆಟ್ಟಿ ಹಾಗೂ ಮಾನ್ಯ ಸುನಿಲ್ ನಾಯ್ಕ್, ವಿಧಾನ ಪರಿಷತ್ ಸದಸ್ಯರಾಗಿರುವ ಮಾನ್ಯ ಗಣಪತಿ ಉಳ್ವೆಕರ್, ಜಿಲ್ಲಾಧಿಕಾರಿ ಮಾನ್ಯ ಪ್ರಭುಲಿಂಗ ಕವಳಿಕಟ್ಟಿ ಹಾಗೂ BSNL ಅಧಿಕಾರಿಗಳು ಇದ್ದರು.

RELATED ARTICLES  ಹೊಸ ಪ್ರಶ್ನೆ ಪತ್ರಿಕೆ ಮಾದರಿಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯವಾಗಲಿ: ರಾಮಪ್ಪ ಸಿ.

ಜಿಲ್ಲಾ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಅನಂತಕುಮಾರ ಹೆಗಡೆ, ಗಂಟೆಗಟ್ಟಲೆ ಅಧಿಕಾರಿಗಳಿಗೆ ವೈಜ್ಞಾನಿಕ ಪಾಠ ಮಾಡಿದರು. ಪೌಷ್ಟಿಕಾಂಶಭರಿತ ಗಿಡಗಳನ್ನ ಗುರುತಿಸಿ ಬೆಳೆಸುವುದು, ನಿಸರ್ಗದ ಸಂಪತ್ತನ್ನು ರಕ್ಷಿಸುವುದು, ಉತ್ತರಕನ್ನಡ ಜಿಲ್ಲೆಯ ಕಾಡುಮೇಡುಗಳಲ್ಲಿನ ಔಷಧಿ ಹಾಗೂ ಪೌಷ್ಠಿಕಾಂಶ ಭರಿತವಾಗಿರುವ ಗಿಡಗಳ ಬಗ್ಗೆ ವಿವರಿಸಿದರು.

RELATED ARTICLES  ಕಾರವಾರದಲ್ಲಿ ಆತ್ಮಹತ್ಯೆಗೆ ಶರಣಾದ ಸರ್ಕಾರಿ ಉದ್ಯೋಗಿ.

ಇಲೆಕ್ಟ್ರಾನ್ ರಿಚ್ ಎಂಬ ವಿಷಯವಾಗಿ ಸಂಸದ ಹೆಗಡೆ ಮಾತನಾಡಿದರು. ಜರ್ಮನ್, ಆಸ್ಟ್ರೇಲಿಯಾದ ನೈಸರ್ಗಿಕ ಉತ್ಪನ್ನಗಳ ಬಗ್ಗೆ, ಅಲ್ಲಿರುವ ಬೇಡಿಕೆಗಳ ಬಗ್ಗೆ ಅವರು ಸಭೆಯಲ್ಲಿ ತಿಳಿಸಿದರು. ಕ್ಲಾಸಲ್ಲಿ ಮಕ್ಕಳು ಶಿಕ್ಷಕರ ಪಾಠ ಕೇಳುವಂತೆ ಗಂಟೆಗಟ್ಟಲೆ ಕುಳಿತು ಅಧಿಕಾರಿಗಳು ಸಂಸದ
ಹೆಗಡೆಯವರ ವೈಜ್ಞಾನಿಕ ಪಾಠ ಕೇಳಿದರು.