ಕಾರವಾರ : ಪಿಕ್ನಿಕ್ ಹಾಗೂ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ನಡೆಯುತ್ತಿರುವ ಅವಘಡಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇಂದು ಸಹ ಅಂತಹುದೇ ಪ್ರಕರಣ ಒಂದು ವರದಿಯಾಗಿದೆ. ಪಿಕ್ ನಿಕ್ ಗೆ ತೆರಳಿದ್ದ ಕಾಲೇಜು ವಿದ್ಯಾರ್ಥಿನಿಯರ ಟ್ಯಾಕ್ಟರ್ ಪಲ್ಟಿಯಾಗಿ 26 ವಿದ್ಯಾರ್ಥಿನಿಯರಿಗೆ ಗಾಯವಾಗಿದ್ದು 8 ಜನ ವಿದ್ಯಾರ್ಥಿನಿಯರಿಗೆ ಗಂಭೀರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಕೊಳಗಿಯಲ್ಲಿ ನಡೆದಿದೆ.
ಗಾಯಾಳುಗಳನ್ನು ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ನಾಲ್ಕುಜನ ವಿದ್ಯಾರ್ಥಿನಿಯರನ್ನು ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಮುಂಡಗೋಡು ತಾಲೂಕಿನ ಮಳಗಿಯಿಂದ ಸಮೀಪದ ಕೊಳಗಿಗೆ ಎರಡು ಟ್ಯಾಕ್ಟರ್ ನಲ್ಲಿ 90 ಜನ ಮಳಗಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ತೆರಳಿದ್ದರು. ಟ್ಯಾಕ್ಟರ್ ಅತೀ ವೇಗದ ಚಾಲನೆಯಿಂದ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಮುಂಡಗೋಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.