ಭಟ್ಕಳ : ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸ್ಪೋಟ ಮಾಡೋದಾಗಿ “ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25 & ಹ್ಯಾಪಿ ನ್ಯೂ ಇಯರ್ 2023” ಎಂದು ಉರ್ದು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬರೆದ ಪೋಸ್ಟ್‌ಕಾರ್ಡ್ ನ್ನು ಭಟ್ಕಳ ಠಾಣೆಗೆ ತಲುಪಿ, ಅದರ ಬಗ್ಗೆ ಪೊಲೀಸ್ ಚುರುಕಿನ ಕಾರ್ಯಾಚರಣೆ ನಡೆಸಿದ್ದಾರೆ. ಇದೀಗ ಆರೋಪಿಯನ್ನು ಚೆನ್ನೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಂಗಳೂರಿನ ಸುಬ್ರಹ್ಮಣ್ಯದಿಂದ ಪೋಸ್ಟ್ ಮಾಡಿದ್ದ ಎನ್ನಲಾಗಿದ್ದು ಇದೀಗ ಕಳ್ಳನನ್ನು ಬಾಡಿ ವಾರಂಟ್ ಮೇಲೆ ಭಟ್ಕಳಕ್ಕೆ ತರಲು ಪೊಲೀಸರು ತಯಾರಿ ನಡೆಸಿದ್ದಾರೆ.

RELATED ARTICLES  ಫ್ಲೈ ಓವರ್ ಕೆಳಭಾಗದಲ್ಲಿ ಕುಳಿತ ಯುವತಿ : ಕೆಲಕಾಲ ಆತಂಕದ ವಾತಾವರಣ

ಇಂತಹುದೇ ಬೆದರಿಕೆ ಚೆನ್ನೈ ನಲ್ಲಿಯೂ ಪತ್ರದ ಮೂಲಕ ಬಂದಿರುವುದು ಬೆಳಕಿಗೆ ಬಂದಿದೆ. ಲ್ಯಾಪ್‌ಟಾಪ್ ಕಳ್ಳತನ ಮಾಡಿದ ಆರೋಪಿಯೋರ್ವ ಅದನ್ನು ಅಂಗಡಿಗೆ ಮಾರಲು ಮುಂದಾಗಿ ಸಿಕ್ಕಿಬಿದ್ದಾಗ ಕಳ್ಳತನದ ವಿಷಯ ಮುಚ್ಚಿಡಲು ಈ ರಿತಿ ಹುಸಿ ಬೆದರಿಕೆ ಪತ್ರ ಬರೆದಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.

RELATED ARTICLES  ದಿನಕರ ಶೆಟ್ಟಿ ಅಭಿಮಾನಿಗಳಿಂದ ವಿಜಯೋತ್ಸವ.

ಲ್ಯಾಪ್‌ಟಾಪ್ ಮಾರಾಟ ಮಾಡಲು ತೆರಳಿದ್ದ ಅಂಗಡಿ ಮಾಲೀಕನ ನಂಬರ್ ಹಾಕಿ ಪತ್ರ ಬರೆದಿದ್ದು ಪತ್ರ ಆಧರಿಸಿ ತನಿಖೆ ನಡೆಸಿದ್ದ ಚೆನ್ನೈ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹೊಸಪೇಟೆ ಮೂಲದ ಹನುಮಂತಪ್ಪ ಹುಸಿ ಬೆದರಿಕೆ ಪತ್ರ ಬರೆದಿರುವ ಕಳ್ಳನಾಗಿದ್ದಾನೆ.