ಕಾರವಾರ: ಕಾರವಾರ ತಾಲೂಕಿನ ಸದಾಶಿವಗಡದ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದ ಐತಿಹಾಸಿಕ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ ತಗುಲಿದ್ದು, ಗುಡ್ಡದಲ್ಲಿನ ಗಿಡಗಳಿಗೆ ಬೆಂಕಿ ವ್ಯಾಪಿಸಿದೆ. ಗುಡ್ಡಕ್ಕೆ ಬೆಂಕಿ ಬಿದ್ದಿರುವುದನ್ನ ಗಮನಿಸಿದ ವಾಹನ ಸವಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಎರಡೂ ಇಲಾಖೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

RELATED ARTICLES  ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ

ಗುಡ್ಡದ ಮೇಲೆ ಜಂಗಲ್ ಲಾಡ್ಜ್ಸ್ನವರ ರೆಸಾರ್ಟ್, ದುರ್ಗಾದೇವಿ ದೇವಸ್ಥಾನವಿದ್ದು, ಗುಡ್ಡದ ಕೆಳಭಾಗದಲ್ಲೇ ಹೆದ್ದಾರಿ ಹಾದುಹೋಗುತ್ತದೆ. ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿರುತ್ತವೆ. ಇದೀಗ ಬೆಂಕಿ
ಕಾಣಿಸಿಕೊಂಡಿರುವುದು ವಾಹನಗಳ ಓಡಾಟಕ್ಕೂ ಆತಂಕ ತಂದೊಡ್ಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

RELATED ARTICLES  ಭಕ್ತರ ಉದ್ಧಾರದ ಹೊರತು, ಪೂರ್ಣಕಾಮ - ಶ್ರೀಸರ್ವಸಮರ್ಥ ರಾಮನಿಗೆ ಮತ್ತೇನು ಕಾರ್ಯವಿದೆ?