ಕಾರವಾರ: ಪ್ರತಿವರ್ಷ ಜನವರಿ ತಿಂಗಳ ಹುಣ್ಣಿಮೆಯಂದು ನಡೆಯುವ ಮೀನುಗಾರರ ಆರಾಧ್ಯ ದೈವವಾದ ನರಸಿಂಹ ದೇವರ ಜಾತ್ರೆಯು ಅದ್ಧೂರಿಯಾಗಿ ಜರುಗಿತು. ಶಾಸಕರಾದ ರೂಪಾಲಿ ನಾಯ್ಕ ಸೇರಿದಂತೆ ಅನೇಕ ಗಣ್ಯರು ಹಾಗೂ ಸಹಸ್ರರು ಜನರು ಭಾಗವಹಿಸಿ ದೇವರಿಗೆ ಹರಕೆ ಪೂಜೆ ಸಲ್ಲಿಸಿದರು. ನಗರದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನೆಲೆನಿಂತಿರುವ ನರಸಿಂಹ ದೇವರ ಜಾತ್ರೆಗೆ ಬೋಟಿನಲ್ಲಿ ತೆರಳುವುದೇ ಒಂದು ವಿಶಿಷ್ಟ ಅನುಭವವಾಗಿದ್ದು, ದ್ವೀಪದಲ್ಲಿನ ಸುಂದರ ಪರಿಸರ ಜಾತ್ರೆಗೆ ಬಂದವರಿಗೆ ಪ್ರವಾಸದ ಅನುಭವ ಸಹ ನೀಡುತ್ತದೆ. ಸಾವಿರಾರು ಜನ ಬೆಳಿಗ್ಗೆಯಿಂದ ಬೋಟ್‌ಗಳಲ್ಲಿ ಕೂರ್ಮಗಡ ನಡುಗಡ್ಡೆಗೆ ತೆರಳಿ ದೇವರ ದರ್ಶವನ್ನ ಪಡೆದರು. ಈ ಜಾತ್ರೆಗೆ ಕೇವಲ ಮೀನುಗಾರರಷ್ಟೇ ಅಲ್ಲದೇ, ವಿವಿಧ ಸಮುದಾಯ ಜನರು ವಿವಿಧೆಡೆಗಳಿಂದ ಆಗಮಿಸಿದ್ದರು.
ದೇವರಲ್ಲಿ ಹರಕೆ ಹೊತ್ತುಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದಾಗಿದ್ದು, ಅದಕ್ಕಾಗಿ ದೇವರಿಗೆ ಬಾಳೆಗೊನೆ ಸೇವೆ ನೀಡುವುದು ಈ ಜಾತ್ರೆಯ ಸಂಪ್ರದಾಯ. ಮೀನುಗಾರರು ಪ್ರತಿವರ್ಷ ಜಾತ್ರೆಗೆ ಆಗಮಿಸಿ ದೇವರಿಗೆ ಬಾಳೆಗೊನೆಯನ್ನ ಅರ್ಪಿಸಿ ಮೀನುಗಾರಿಕೆ ಉತ್ತಮವಾಗಿ ನಡೆಯಲಿ ಎಂದು ಬೇಡಿಕೊಳ್ಳುವುದು ವಿಶೇಷ.

RELATED ARTICLES  ಸಮಯದ ಜೊತೆ ಹೆಜ್ಜೆ ಸಾಗಲಿ

ಈ ಕೂರ್ಮಗಡ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಹಿಮಾಲಯದಿಂದ ಬಂದ ಸಾದು ಒರ್ವ ಸಾಲಿಗ್ರಾಮವನ್ನ ತಂದು ತಾಲೂಕಿನ ಕಡವಾಡ ಗ್ರಾಮದ ಮನೆಯವರಿಗೆ ನೀಡಿ ಕಾಳಿ ನದಿ ಹಾಗೂ ಅರಬ್ಬಿ ಸಮುದ್ರ ಸೇರುವ ಸಂಗಮದಲ್ಲಿ ಸಾಲಿಗ್ರಾಮವನ್ನ ಇಟ್ಟು ಪೂಜೆ ಮಾಡಬೇಕು ಎಂದು ಹೇಳಿದ್ದರಂತೆ. ಅದರಂತೆ ಪ್ರತಿ ವರ್ಷ ಕಾಳಿ ಸಂಗಮ ಸಮೀಪ ಇರುವ ಕೂರ್ಮಗಡ ನಡುಗಡ್ಡೆಗೆ ದೇವರನ್ನ ತಂದು ಪೂಜೆ ನಡೆಸಲಾಗುತ್ತದೆ.

RELATED ARTICLES  ಕನವರಿಕೆ (ಉಮೇಶ ಮುಂಡಳ್ಳಿಯವರು ಬರೆದ ಕವನ)