ಕುಮಟಾ ತಾಲೂಕಿನ ಕಾಗಾಲ ಗ್ರಾಮದ ಮಂಜುನಾಥ ಎಂ ಬೀರಕೋಡಿಯವರು ದಿನಾಂಕ 07/01/ 2023 ರ ಶನಿವಾರ ಕೆಲಕಾಲದ ಅನಾರೋಗ್ಯದಿಂದಾಗಿ ಮಧ್ಯಾಹ್ನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. 85 ವರ್ಷ ವಯಸ್ಸಿನ ಹಿರಿಯ ಚೇತನರಾದ ಇವರು.ಭಂಡಾರಿ ಸಮಾಜೋನ್ನತಿ ಸಂಘದ ಜಿಲ್ಲಾ ಸದಸ್ಯರಾಗಿ ಹಾಗೂ ಕುಮಟಾ ತಾಲೂಕಾ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದವರಾಗಿದ್ದಾರೆ. ಮೃತರು ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ತಾಲೂಕಾ ಭಂಡಾರಿ ಸಮಾಜೋನ್ನತಿ ಸಂಘದ ಅಧ್ಯಕ್ಷ ಶ್ರೀಧರ ಆರ್ ಬೀರಕೋಡಿ ಕಾರ್ಯದರ್ಶಿ ಅರುಣ ಮಣಕೀಕರ್ ,ಮಾಜಿ ಅಧ್ಯಕ್ಷ ಕೇಶವ ಅಡ್ಪೇಕರ್,ಮಹಿಳಾ ಸಂಘದ ಅಧ್ಯಕ್ಷೆ ಸೂಷ್ಮಾ ಗಾಂವ್ಕರ್, ಚಿದಾನಂದ ಭಂಡಾರಿ,ಹನುಮಂತ ದೇಶಭಂಡಾರಿ,ಗೌರೀಶ ಭಂಡಾರಿ ಮೊದಲಾದವರು ಸಂತಾಪ ಸೂಚಿಸಿದ್ದಾರೆ.