ಅಂಕೋಲಾ : ರಾ.ಹೆ. 66 ರ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ಹೊಸ ವರ್ಷದ ಮೊದಲ ದಿನ ಸಂಭವಿಸಿದ ಭೀಕರ ರಸ್ತೆ ಅಪಘಾತ ಹಸಿಯಾಗಿರುವಾಗಲೇ ಅದೇ ಸ್ಥಳದ ಹತ್ತಿರ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಪಕ್ಕ ನಿಲ್ಲಿಸಿದ್ದ ಟ್ಯಾಂಕರ್ ಗಾಡಿ ಒಂದಕ್ಕೆ ಡಿಕ್ಕಿ ಹೊಡೆದುಕೊಂಡಿದೆ. ಈ ಅಪಘಾತದಲ್ಲಿ ಪಾದಾಚಾರಿ ಯುವತಿ ಮೃತಪಟ್ಟಿದ್ದು ಕಾರನಲ್ಲಿದ್ದ ದಂಪತಿಗಳಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದಲ್ಲಿ ಹುಬ್ಬಳ್ಳಿ ಮೂಲದ ಸಾವಂತ್ರಿ ಸಂಜೀವಪ್ಪ ಗುಜನುರು ಎಂಬ ಯುವತಿ ಮೃತ ಪಟ್ಟಿದ್ದಾಳೆ. ಅಪಘಾತದ ರಬ್ಬಸಕ್ಕೆ ಕಾರ್ ನ ಮುಂಭಾಗ ನುಚ್ಚುಗುಜ್ಜಾಗಿದ್ದು ಕೇರಳ ಮೂಲದ ಗೋವಾಕ್ಕೆ ಹೊರಟಿದ್ದ ದಂಪತಿಗಳಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾವಂತಿ ಹೆದ್ದಾರಿ ಪಕ್ಕದಿಂದ ನಡೆದುಕೊಂಡು ಬರುತ್ತಿದ್ದಾಗ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ಬಡಿದು ಈ ಸಾವು ಸಂಭವಿಸಿದೆ.ಅಪಘಾತದ ಸ್ಥಳದಿಂದ ಗಾಯಾಳುಗಳನ್ನು ತಾಲೂಕ್ ಆಸ್ಪತ್ರೆಗೆ ಸಾಗಿಸಿ,ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.ಐಆರ್‌ಬಿ, 112 ತುರ್ತು ವಾಹನ ಸಿಬ್ಬಂದಿಗಳು, 1033 ಹೈವೇ ಸಿಬ್ಬಂದಿಗಳು ಹಾಗೂ 108 ಅಂಬುಲೆನ್ಸ್, ಹಾಗೂ ಸಿ ಪಿ ಐ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.