ಸಿದ್ದಾಪುರ : ಪಟ್ಟಣದ ಹಾಳದಕಟ್ಟಾದಲ್ಲಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಹಿಸಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಹೊಸಗದ್ದೆ ಇಟಗಿ ನಿವಾಸಿ ರಮೇಶ್ ಗಜಾನನ ಹೆಗಡೆ ಮೃತ ದುರ್ದೈವಿ ಎಂದು ತಿಳಿದುಬಂದಿದೆ.

RELATED ARTICLES  ನಕಲಿ ಖಾತೆಗಳಿರುವುದು ಫೇಸ್ ಬುಕ್ ಗೂ ಗೊತ್ತು! ಹುಷಾರ್

ಸಿದ್ದಾಪುರ ಸೊರಬ ಮುಖ್ಯ ರಸ್ತೆಯಲ್ಲಿ ಕಾರ್ ಚಾಲಕನು ತನ್ನ ಕಾರನ್ನು ಅತಿವೇಗದಿಂದ ಸೊರಬ ಕಡೆಯಿಂದ ಸಿದ್ದಾಪುರ ಕಡೆಗೆ ಚಲಾಯಿಸಿಕೊಂಡು ಬಂದು ಎದುರಿನಿಂದ ಬಂದ ಬೈಕ್ಗೆ ಡಿಕ್ಕಿ ಹೊಡೆಸಿ ಸವಾರನಿಗೆ ಗಂಭೀರ ಗಾಯವಾಗಿ ಬೈಕ್ ಸವಾರ ಸ್ಥಳದಲ್ಲಿ ಮೃತ ಪಟ್ಟಿದ್ದು, ಈ ಘಟನೆ ಗೆ ಸಂಬಂಧಿಸಿದಂತೆ ಮೃತರ ಸಂಬಂಧಿಕರು ಸಿದ್ದಾಪುರ ಠಾಣೆ ಯಲ್ಲಿ ದೂರು ನೀಡಿದ್ದಾರೆಮ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ರು ತನಿಖೆ ಮುಂದುವರೆಸಿದ್ದಾರೆ

RELATED ARTICLES  ಗಾಂಜಾ ಅಮಲಿನಲ್ಲಿ ಮಾನಿನಿಯರ ಹುಚ್ಚಾಟ : ಮಹಿಳಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ.