ಕುಮಟಾ : ತಾಲೂಕಿನ ಬಗ್ಗೋಣದ “ಸಾಧನಾ ಸಂಗೀತ ವಿದ್ಯಾಲಯ”ದ ವಾರ್ಷಿಕೋತ್ಸವ “ನಾದೋಪಾಸನೆ” ಹೆಸರಿನಲ್ಲಿ ಪಟ್ಟಣದ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ಪ್ರಾಧ್ಯಾಪಕರು ಹಾಗೂ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ವಿಶ್ವವಿದ್ಯಾಲಯ ವಿಭಾಗ, ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಮದ್ರಾಸ್ ನ ಡಾ|| ಮಂಜುನಾಥ ಎನ್. ಅಂಬಿಗ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂದಿನ ವೇದಿಕೆಯಲ್ಲಿ ನನಗೆ ಅವಕಾಶ ಸಿಕ್ಕಿರುವುದು ನನ್ನ ಪೂರ್ವಜನ್ಮದ ಪುಣ್ಯ, ಸಂಗೀತದ ಬಗ್ಗೆ ಮಾತನಾಡುವುದು ಎಂದರೆ ಅದು ತುಂಬಾ ಕಷ್ಟದ ಕೆಲಸ. ತಾನು ಸಾಹಿತ್ಯದಲ್ಲಿ ಕೆಲಸ‌ಮಾಡುವಾಗ ಸಂಗೀತ ಕ್ಷೇತ್ರದಲ್ಲಿ ನಂಟು ಬೆಳೆಯಿತು. ಸಂಗೀತ ಕಲಿಯುವುದು ಎಂದರೆ ಸಂಸ್ಕಾರ ಕಲಿಯುವುದು ಎಂದೇ ಅರ್ಥ. ಸಂಗೀತ ಕಲಿಸುವ ಶಿಕ್ಷಕಿ ಲಕ್ಷ್ಮೀ ಹೆಗಡೆ ಜಿ.ಆರ್ ಭಟ್ಟರವರ ಪರಂಪರೆ ಮುಂದುವರೆಸಿರುವುದು ಸಂತಸದ ವಿಚಾರವಾಗಿದೆ ಎಂದು ಅವರು ಶ್ಲಾಘಿಸಿದರು.

ಚಿತ್ರಕಲಾವಿದರು, ರಾಜ್ಯ ಲಲತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ವಿಶ್ವೇಶ್ವರ ಎಮ್. ಪಟಗಾರ ಅತಿಥಿಗಳಾಗಿ ಹಾಜರಿದ್ದು ಅವರು ಪೆನ್ಸಿಲ್ ಸ್ಕೆಚ್ ಮೂಲಕ ಬಿಡಿಸಿದ ಪಂ. ಜಿ.ಆರ್ ಭಟ್ಟ ಬಾಳೆಗದ್ದೆ ಅವರ ಭಾವಚಿತ್ರವನ್ನು ಸಾಧನಾ ಸಂಗೀತ ವಿದ್ಯಾಲಯಕ್ಕೆ ಸಮರ್ಪಿಸಿದರು. ಹಾಗೂ ತನ್ನ ಕಲೆ ಹಾಗೂ ಸಂಗೀತ ಇದೆರಡೂ ಒಂದಕ್ಕೊಂಡು ಸಂಬಂಧ ಹೊಂದಿದೆ ಎಂದು ಅಭಿಪ್ರಾಯಪಟ್ಟರು.

RELATED ARTICLES  ಲೋಕನಾಥ ಪ್ರೌಢಶಾಲೆ: ಸಮಾಜ ವಿಜ್ಞಾನ ಕಾರ್ಯಾಗಾರ- ಒತ್ತಡ ರಹಿತ ಪರೀಕ್ಷೆ ಎದುರಿಸಲು ಸಲಹೆ

ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ವಿ.ಪಿ ಶಾನಭಾಗ ಮಾತನಾಡಿ ಸಂಗೀತ ಎಲ್ಲರಿಗೆ ಸುಲಭವಾಗಿ ಒಗ್ಗುವುದಲ್ಲ. ಆಸಕ್ತಿಯ ಜೊತೆಗೆ ಸತತ ಪರಿಶ್ರಮದಿಂದ ಮಾತ್ತವೇ ಸಂಗೀತ ಕಲೆ ನಮಗೆ ಒಲಿಯಬಹುದು ಹೀಗಾಗಿ ಸಂಗೀತ ಕಲಿಯುವ ಮಕ್ಕಳೆಲ್ಲರೂ ಸಂಗೀತವನ್ನು ತಪಸ್ಸಿನ ರೀತಿಯಲ್ಲಿ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಲಕ್ಷ್ಮೀ ಹೆಗಡೆಯವರು ಶ್ರೇಷ್ಠ ಸಂಗೀತ ಕಲಾವಿದರು ಅವರು ಮಕ್ಕಳಿಗೆ ಸಂಸ್ಕಾರ ಕೊಡುವ ಉದ್ದೇಶದಿಂದ ಸಂಸ್ಥೆ ಸ್ಥಾಪಿಸಿರುವುದು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗುವ ವಿಚಾರ ಎಂದರು. ಜೊತೆಗೆ ಲಕ್ಷ್ಮಿಹೆಗಡೆಯವರ ಎಲ್ಲಾ ಕಾರ್ಯದಲ್ಲಿ ಜೊತೆಯಾಗುವ ಅವರ ಪತಿ ಬಾಲಚಂದ್ರ ಹೆಗಡೆಯವರ ಕಾರ್ಯವೂ ಶ್ಲಾಘನೀಯ, ಅಂತಹ ಬೆಂಬಲ ಸಂಗೀತಕ್ಕೆ ಅಗತ್ಯವಿದೆ ಎಂದರು.

ಹಿರಿಯ ತಬಲಾ ವಾದಕ ಕುಮಟಾದ ಶ್ರೀಧರ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ ಗುರು ಸಮಾನರಾದ ಪಂ. ಜಿ ಆರ್ ಭಟ್ಟ ಬಾಳೆಗದ್ದೆಯವರ ಜೊತೆಗಿನ ಒಡನಾಟವನ್ನು ಸ್ಮರಿಸಿದರು. ಲಕ್ಷ್ಮೀ ಹೆಗಡೆಯವರು ಒಬ್ಬ ಸ್ತ್ರೀಯಾಗಿ ಇಂತಹ ಕಾರ್ಯಕ್ರಮ ಸಂಘಟಿಸುವುದು ಅದ್ಭುತವಾದ ವಿಚಾರ ಎಂದು ಶುಭ ಹಾರೈಸಿದರು.

RELATED ARTICLES  ಇಂದಿನ(ದಿ-23/01/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ಸಾಧನಾ ಸಂಗೀತ ವಿದ್ಯಾಲಯದ ಸಂಗೀತ ಶಿಕ್ಷಕಿ ಶ್ರೀಮತಿ ಲಕ್ಷ್ಮಿ ಹೆಗಡೆ ಸರ್ವರನ್ನೂ ಸ್ವಾಗತಿಸಿದರು. ಅಶೋಕ ಭಟ್ಟ ಸಭಾ ಗಣ್ಯರನ್ನು ಸ್ವಾಗತಿಸಿದರು. ಮಹೇಶ ನಾಯ್ಕ ವಂದಿಸಿದರು. ಎನ್. ಜಿ ಹೆಗಡೆ ಹಾಗೂ ಭಾರತಿ ಹೆಗಡೆ ಸಹಕರಿಸಿದರು.

ಬೆಳಗಿನಿಂದ ನಡೆದ ಮಕ್ಕಳ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ವಿದ್ಯಾಲಯದ ಹಲವಾರು ವಿದ್ಯಾರ್ಥಿಗಳು ಗಾಯನ ವಾದನವನ್ನು ಪ್ರಸ್ತುತಪಡಿಸಿದರು. ವಿನಾಯಕ ಭಟ್ಟ, ಕೃಷ್ಣಪ್ರಸಾದ ಹೆಗಡೆ, ಹರಿಶ್ಚಂದ್ರ ನಾಯ್ಕ ಸಹಕರಿಸಿದರು. ಧಾರವಾಡದ ಉಸ್ತಾದ್ ನಿಸಾರ್ ಅಹಮದ್ ಧಾರವಾಡ ಹಾಗೂ ಅವರ ಶಿಷ್ಯ ಯೋಗಾನಂದ ಭಟ್ಟ ಇವರು ತಬಲಾ ಸೋಲೋ ಮೂಲಕ ಜನರ ಮನ ಗೆದ್ದರು.

ಸಭಾ ಕಾರ್ಯಕ್ರಮದ ನಂತರ ಅಂತರಾಷ್ಟ್ರೀಯ ಸಂಗೀತ ಕಲಾವಿದ ಕೋಲ್ಕತ್ತಾದ ಗುರುದತ್ತ ಅಗ್ರಹಾರ ಕೃಷ್ಣಮೂರ್ತಿ ಅದ್ಬುತ ಸಂಗೀತದ ಮೂಲಕ ಜನರನ್ನು ಮಂತ್ರಮುಗ್ದಗೊಳಿಸಿದರು. ಶೇಷಾದ್ರಿ ಅಯ್ಯಂಗಾರ್ ತಬಲಾದಲ್ಲಿ ಹಾಗೂ ಸಾರಂಗ ಕುಲಕರ್ಣಿ ಬೆಳಗಾವಿ ಸಂವಾದಿನಿಯಲ್ಲಿ ಸಹರಿಸಿದರು.