ಗೋಕರ್ಣ : ಶತಮಾನದ ಸಂತ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯ ಅಸ್ಥಿಯನ್ನು ಅವರ ಅಭಿವಂದನಾ ಪತ್ರದಲ್ಲಿ ದಾಖಲಿಸಿದಂತೆಯೇ ನದಿ ಹಾಗೂ ಸಮುದ್ರದಲ್ಲಿ ಇಮದು ವಿಸರ್ಜನೆ ಮಾಡಲಾಗಿದೆ. ಅರಬ್ಬಿಯ ಒಡಲಲ್ಲಿ ಲೀನವಾದ ಸಿದ್ದೇಶ್ವರ ಶ್ರೀ ಸಾವಿರಾರು ಭಕ್ತರ ಉದ್ವೇಷಗಳೊಂದಿಗೆ ವಿಜಯಪುರದ ಜ್ಞಾನನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನ ಗೋಕರ್ಣದ ಕಡಲಿನಲ್ಲಿ ವಿಸರ್ಜನೆ ಮಾಡಲಾಯಿತು. ಈ ಮೂಲಕ ಇದೇ ಮೊದಲ ಬಾರಿಗೆ ಗೋಕರ್ಣದ ಸಮುದ್ರದಲ್ಲಿ ಅಸ್ತಿ ವಿಸರ್ಜನೆಗೆ ಚಾಲನೆ ನೀಡಿದಂತಾಗಿದೆ. ಸಾಮಾನ್ಯವಾಗಿ ಗೋಕರ್ಣದ ತಾಮ್ರಪರ್ಣಿಯಲ್ಲಿ ಅಸ್ತಿ ವಿಸರ್ಜನೆ ಮಾಡುವುದು ರೂಢಿ. ಆದರೆ ಸಿದ್ದೇಶ್ವರ ಶ್ರೀಗಳ ಆಶಯದಂತೆ ಗೋಕರ್ಣದ ಮುಖ್ಯ ಕಡಲಿನಲ್ಲಿ ಚಿತಾಭಸ್ಮ ವಿಸರ್ಜನೆ ಮಾಡುವ ಮೂಲಕ ಅರಬ್ಬಿಯ ಒಡಲಿಗೆ ಶ್ರೀಗಳನ್ನ ಲೀನ ಮಾಡಲಾಯಿತು.

RELATED ARTICLES  ನವಿಲನ್ನೇ ನುಂಗಿದ ಹೆಬ್ಬಾವು..!

ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಚಿತಾಭಸ್ಮವಿಸರ್ಜನಾ ಕಾರ್ಯದಲ್ಲಿ ವಚನನಾನಂದ ಸ್ವಾಮೀಜಿ ಸೇರಿದಂತೆ 20ಕ್ಕೂ ಅಧಿಕ ಸ್ವಾಮೀಜಿಗಳು ಭಾಗಿಯಾದರು. ತೀರದಲ್ಲಿ ಮೊದಲು ಪೂಜೆ ಸಲ್ಲಿಸಿ, ಬಳಿಕ ಬೋಟ್ ಮೂಲಕ ತೆರಳಿ ಕಡಲಿಗೆ ಚಿತಾಭಸ್ಮವನ್ನ ಚೆಲ್ಲಲಾಯಿತು. ಈ ವೇಳೆ ಭಕ್ತರು, ಶಿಷ್ಯವೃಂದದವರಿಂದ ಉದ್ವೇಷಗಳು ಮೊಳಗಿದವು. ಹಲವರ ಕಣ್ಣಾಲಿಯಲ್ಲಿ ನೀರು ಜಿನುಗುತ್ತಿತ್ತು.

RELATED ARTICLES  ಆರರ ಮಹಿಮೆ ಹೀಗಿದೆ ನೋಡಿ.