ಭಟ್ಕಳ : ಪ್ರವಾಸಕ್ಕಾಗಿ ಮುರುಡೇಶ್ವರಕ್ಕೆ ಬಂದು ಸಮುದ್ರ ತೀರದಲ್ಲಿ ಕಳೆದುಕೊಂಡಿದ್ದ ವಸ್ತುಗಳನ್ನು ಪ್ರವಾಸಿಗನಿಗೆ ಪೊಲೀಸರು ಹಿಂತಿರುಗಿಸಿದ್ದಾರೆ. ಹೊನ್ನಾವರ ಮೂಲದ ಪ್ರಮೋದ ರಾಮಚಂದ್ರ ಜಾಧವ ಎಂಬ ವ್ಯಕ್ತಿ ಮುರುಡೇಶ್ವರ ಪ್ರವಾಸಕ್ಕೆ ಬಂದಾಗ ಸಮುದ್ರ ದಡದಲ್ಲಿ 2 ಉಂಗುರ, ಬಂಗಾರದ ಸರ, ಮೊಬೈಲ್ ಹಾಗೂ ಸಾವಿರ ರೂಪಾಯಿಯನ್ನು ಕಳೆದುಕೊಂಡಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಮೊಬೈಲ್ ಫೋನ್ ಲೊಕೇಶನ್ ಆಧಾರದಲ್ಲಿ ಎಲ್ಲ ಸ್ವತ್ತುಗಳನ್ನು ಪತ್ತೆ ಹಚ್ಚಿ ಹಿಂದಿರುಗಿಸಿದ್ದಾರೆ. ಮುರುಡೇಶ್ವರ ಪಿಎಸ್‌ಐ ದೇವರಾಜ್ ಬಿರಾದಾರ್, ಸಿಬ್ಬಂದಿ ಮುರುಳಿ ಮತ್ತು ಬಿಲಾಲ್ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES  ವನಮಹೊತ್ಸವ ಕಾರ್ಯಕ್ರಮ