ಕಾರವಾರ : ಕದ್ರಾ ಅರಣ್ಯ ವಲಯದ ಗಾಯಗೊಂಡಿದ್ದ ಹಾರುವ ಅಳಿಲನ್ನು ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರು ರಕ್ಷಿಸಿ, ಸೂಕ್ತ ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಟ್ಟಿದ್ದಾರೆ. ಇದು ಬಹು ಅಪರೂಪ ಹಾಗೂ ಹಾರುವ ಅಳಿಲಾಗಿದ್ದು, ಮರದಿಂದ ಹಾರುವ ವೇಳೆ ಮರಕ್ಕೆ ಆಕಸ್ಮಾತಾಗಿ ಸಿಬ್ಬಂದಿಯೋರ್ವರ ಮನೆಯ ಟೆರೇಸ್ ಮೇಲೆ ಬಿದ್ದಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ರಕ್ಷಕ ನಾಗರಾಜ್ ಅವರಿಗೆ ಕರೆ ಮಾಡಿ ತಿಳಿಸಿದ್ದರು. ನಾಗರಾಜ್ ಅವರು ಬಿಲಾಲ್ ಅವರಿಗೆ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ತೆರಳಿ ಹಾರುವ ಅಳಿಲಿಗೆ ಅಗತ್ಯ ಚಿಕಿತ್ಸೆ ನೀಡಿ, ವಲಯ ಅರಣ್ಯ ಅಧಿಕಾರಿ ಲೋಕೇಶ್ ಪಾಟಣಕರ್‌ ಅವರ ಮಾರ್ಗದರ್ಶನದಲ್ಲಿ ಪುನಃ ಕಾಡಿಗೆ ಬಿಟ್ಟಿದ್ದಾರೆ.

RELATED ARTICLES  ಅಲೆಗಳ ಹೊಡೆತಕ್ಕೆ ಸಿಕ್ಕು ಒದ್ದಾಡುತ್ತಿದ್ದವರ ರಕ್ಷಣೆ.