ಭಟ್ಕಳ : ಭಟ್ಕಳ ಜಿಎಸ್‌ಬಿ ಸಮಾಜ ಬಾಂಧವರಿಗಾಗಿ ಹೂನ್ ಸಿತ್ ತೀಕ್ ಆಂಬಟ ಎನ್ನುವ ಸಸ್ಯಹಾರಿ ಮತ್ತು ಮೀನುಗಳ ಖಾದ್ಯ ಸವಿಯುವ ವಿನೂತನ ಮಾದರಿಯ ಔತಣಕೂಟ ನಡೆಯಿತು. ಸಮಾಜ ಬಾಂಧವರೊದಿಗೆ ಬೆರೆಯಲು ಇದೊಂದು ವಿಶಿಷ್ಟ ಅವಕಾಶ. ಇದರ ವಿಶೇಷವೆಂದರೆ ಇಲ್ಲಿ ಸಸ್ಯಹಾರಿ ಮಾತ್ರವಲ್ಲದೇ ಮೀನುಗಳ ಖಾದ್ಯಗಳನ್ನು ಮಾಡಲಾಗುತ್ತದೆ.
ದುಬಾರಿ ಬೆಲೆಯ ಮೀನುಗಳ ಖಾದ್ಯಗಳನ್ನು ನಿರ್ಮಿಸಿ ಸಮಾಜ ಬಾಂಧವರಿಗೆ ಉಣಬಡಿಸಲಾಗುತ್ತದೆ. ಸಮಾಜದ ಎಲ್ಲರೂ ಉತ್ತಮ ಬಗೆಯ ಖಾದ್ಯಗಳನ್ನು ಒಟ್ಟಿಗೆ ಸವಿಯಬೇಕು. ಒತ್ತಡ, ಕಾರ್ಯಗಳನ್ನೆಲ್ಲ ಮರೆತು ಒಂದೇ ಬಾರಿ ಒಟ್ಟಿಗೆ ಕುಳಿತು ಭೋಜನ ಸವಿಯಬೇಕು ಎನ್ನುವ ಉದ್ದೇಶ ಇದರಲ್ಲಿದೆ.
ಸಮಾಜದ ಗಣ್ಯರ ಸಹಕಾರ, ಮಹಿಳೆಯರ ಶ್ರಮದಿಂದ ಇದು ಕಳೆದ ಹಲವು ವರ್ಷಗಳಿಂದ ಉತ್ತಮವಾಗಿ ನಡೆದುಕೊಂಡು ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಊರುಗಳಲ್ಲೂ ಈ ಸಂಪ್ರದಾಯ ನಡೆಯುತ್ತಿದೆ.