ಕುಮಟಾ: ದಿ. ೦೬-೦೧-೨೦೨೩ ರಂದು ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ, ಕೊಂಕಣದ ಸಿವಿಎಸ್‌ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ಗುಂಪು ಮತ್ತು ವೈಯಕ್ತಿಕ ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಗುಂಪು ವಿಭಾಗದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ೩೪ ತಂಡಗಳ ಪೈಕಿ, ಒಂಭತ್ತನೇ ವರ್ಗದ ವಿದ್ಯಾರ್ಥಿಗಳಾದ ಕೃತಿಕಾ ಆರ್. ಗಾಂವಕರ್ ಮತ್ತು ರಚನ್ ಎಸ್. ನಾಯ್ಕ ಇವರ ತಂಡವು ಹೀಟ್ ರಿಕವರಿ ಸಿಸ್ಟಮ್ ವಿಜ್ಞಾನ ಮಾದರಿಗಾಗಿ ರಾಜ್ಯಕ್ಕೆ ೬ನೇ ಸ್ಥಾನವನ್ನು ಪಡೆದಿದೆ.
ವೈಯಕ್ತಿಕ ಸ್ಪರ್ಧೆಯಲ್ಲಿ ಹತ್ತನೇ ವರ್ಗದ ವಿದ್ಯಾರ್ಥಿ ಸುಮಂತ್ ಎಂ. ಶಾಸ್ತಿç ಈತನು ಪ್ರದರ್ಶಿಸಿದ ಜ್ಯಾಮೆಟ್ರಿಕಲ್ ಫಿಗರ್ಸ್ ಗಣಿತ ಮಾದರಿಯು ೧೮ನೇ ಸ್ಥಾನ ಪಡೆದು ಇವರೆಲ್ಲರೂ ಕೇರಳದಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ್ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕಿಯರು, ಶಿಕ್ಷಕರು ಸಾಧಕರನ್ನು ಅಭಿನಂದಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.