ಹೊನ್ನಾವರ : ಹೊನ್ನಾವರದ ಎಂ.ಪಿ.ಇ ಸೊಸೈಟಿಯ ಎಸ್. ಡಿ .ಎಂ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಎಸ್. ಎಸ್ .ಹೆಗಡೆ ನಿವೃತ್ತ ಪ್ರಾಚಾರ್ಯರು, ಎಸ್. ಡಿ ಎಮ್ ಪದವಿ ಮಹಾವಿದ್ಯಾಲಯ ಇವರು ಆಗಮಿಸಿ ವಿದ್ಯಾರ್ಥಿಗಳಾದ ನೀವು ಇತಿಹಾಸದ ಪುಟವನ್ನು ನೋಡಿದಾಗ ಬಹಳಷ್ಟು ತ್ಯಾಗ ಬಲಿದಾನಗಳ ಮುಖಾಂತರ ನಮ್ಮ ದೇಶ ಸ್ವಾತಂತ್ರವನ್ನು ಪಡೆದಿದ್ದು ತಿಳಿಯುತ್ತದೆ .ಆದ್ದರಿಂದ ನಾವು ದೇಶಭಕ್ತಿ, ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಮಾರ್ಗದರ್ಶನವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಯುತ ಎಂ .ಎಚ್. ಭಟ್ ರವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರುಗಳು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಒಕ್ಕೂಟದ ಸಲಹೆಗಾರರಾದ ಶ್ರೀಯುತ ವಿನಾಯಕ್ ಭಟ್ ರವರು ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.