ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿ, ಭಟ್ಕಳ ಇದರ ೨೫ನೇ ವಾರ್ಷಿಕೋತ್ಸವವು ದಿ. ೦೭.೦೧.೨೦೨೩ ರಂದು ಭಟ್ಕಳದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಶ್ರೀ ಗುರುದತ್ತ ಬಂಟ್ವಾಳಕರ, ಸಿ.ಇ.ಒ, ವಿಶ್ವ ಕೊಂಕಣಿ ಕೇಂದ್ರ, ಮಂಗಳೂರು ಇವರು ಭಟ್ಕಳ ಜಿ.ಎಸ್.ಎಸ್ ಸಂಸ್ಥೆಯ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿ, ಕೊಂಕಣಿ ಭಾಷೆಯ ಮಹತ್ವ, ಯುವ ಜನತೆಗೆ ಲಭ್ಯವಿರುವ ಅವಕಾಶಗಳ ಬಗ್ಗೆ ಮಾತನಾಡಿದರು.
ಅತಿಥಿಗಳಾದ ಶ್ರೀ ಪ್ರದೀಪ ಜಿ ಪೈ, ವ್ಯವಸ್ಥಾಪಕ ನಿರ್ದೇಶಕರು, ಹಾಂಗ್ಯೋ ಐಸ್ ಕ್ರೀಮ್ಸ್ ಪ್ರೆöÊ ಲಿ ರವರು ಸಮಾಜಬಾಂಧವರು ಉತ್ತಮ ಶಿಕ್ಷಣ, ಯೋಗ್ಯ ಕೌಶಲ್ಯವನ್ನು ಹೊಂದಬೇಕು ಎಂದು ತಿಳಿಸಿದರು. ಸಂಸ್ಥಾಪಕಾಧ್ಯಾಕ್ಷರಾದ ಶ್ರೀ ಸುರೇಂದ್ರ ಶಾನಭಾಗ ರವರು ಜಿ.ಎಸ್.ಎಸ್ ಬೆಳೆದು ಬಂದ ಹಾದಿಯನ್ನು ತಿಳಿಸುತ್ತಾ, ಜೀವನದಲ್ಲಿ ಅಸಾಧ್ಯವಾದುದು ಯಾವುದು ಇಲ್ಲ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

RELATED ARTICLES  ಶಾಸಕ ದಿನಕರ ಶೆಟ್ಟಿಯವರಿಗೂ ಕೊರೋನಾ ಪಾಸಿಟೀವ್..


ಈ ಸಂದರ್ಭದಲ್ಲಿ ಶ್ರೀ ಹನುಮಂತ ಮಾಳಪ್ಪ ಪೈ (ಪುತ್ತು ಪೈ) ರವರ ಸ್ಮರಣಾರ್ಥ ಶ್ರೀ ಹನುಮಂತ ಮಾಳಪ್ಪ ಪೈ ಸೇವಾ ಸಾಧಕ ಪುರಸ್ಕಾರ ವನ್ನು ಶ್ರೀ ಸುರೇಂದ್ರ ಶಾನಭಾಗ ರವರಿಗೆ, ಶ್ರೀ ಕೆ.ಎಂ.ನಾಯಕ ಸಾಧಕ ಪುರಸ್ಕಾರವನ್ನು ಭಟ್ಕಳ ಮೂಲದ ಯುವ ವೈದ್ಯರಾದ ಡಾ. ವಿವೇಕ ಮಾರುತಿ ಪೈ ರವರಿಗೆ, ಶ್ರೀಮತಿ ತಾರಾಬಾಯಿ ಹನುಮಂತ ಶಾನಭಾಗ ಸ್ಮರಣಾರ್ಥ ಆದರ್ಶ ಸದ್ಗçಹಿಣಿ ಪರಸ್ಕಾರವನ್ನು ಜ್ಯೋತಿ ಸುರೇಶ ಕಾಮತರಿಗೆ ನೀಡಲಾಯಿತು. ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ನೀಡಿದ ವನಿತಾ ಮಹಿಳಾ ಮಂಡಳಿಯ ಶ್ರೀಮತಿ ವೀಣಾ ಗಣಪತಿ ಪೈ, ಸಮಾಜದ ಯುವ ಮಹಿಳಾ ನ್ಯಾಯವಾದಿ ಕುಮಾರಿ ಸಮೃದ್ಧಿ ಶಿವರಾಯ ಕಾಮತ,
ಜೆ.ಇ.ಇ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ಐ.ಐ.ಟಿ ಬಾಂಬೆ ಯಲ್ಲಿ ಸ್ಥಾನ ಪಡೆದ ಕುಮಾರ. ಪಾರ್ಥ ಪುಂಡಲೀಕ ಪೈ ರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಮಿತಿಯ ೨೫ ವರ್ಷಗಳ ಸಾಧನೆಯನ್ನು ಹೊಂದಿದ “ಸೇವಾ ಸ್ಫೂರ್ತಿ” ಎಂಬ ಕೈಪಿಡಿಯನ್ನು ಲೋಕಾರ್ಪಣೆ ಮಾಡಲಾಯಿತು. ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ಸುಬ್ರಾಯ ಕಾಮತ, ಜಿ.ಎಸ್.ಎಸ್ ಅಧ್ಯಕ್ಷರಾದ ಕಲ್ಪೇಷ ಪೈ, ಮಹಿಳಾ ಸಮಿತಿ ಅಧ್ಯಕ್ಷರಾದ ನೀತಾ ಕಾಮತ, ಗೌರವಾಧ್ಯಕ್ಷ ನರೇಂದ್ರ ನಾಯಕ, ಪದ್ಮನಾಭ ಪೈ, ಗಣಪತಿ ಪ್ರಭು, ನಾಗೇಶ ಪೈ, ಕಿರಣ ಶಾನಭಾಗ, ಉದ್ಯಮಿ ದೀಪಾ ಪ್ರದೀಪ ಪೈ, ನಾರಾಯಣ ಶಾನಭಾಗ, ರಾಮದಾಸ ಪ್ರಭು, ಅಚ್ಚುತ ಕಾಮತ, ಡಾ. ಸವಿತಾ ಕಾಮತ ಸಹಿತ ಸಾವಿರಾರು ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES  ಆತ್ಮಹತ್ಯೆಗೆ ಶರಣಾದ ಖ್ಯಾತ ಸಿನಿಮಾ ನಟ.


ಜಿ.ಎಸ್.ಬಿ ಸಮಾಜ ಬಾಂಧವರಿAದ ರಾಷ್ಟçಪ್ರೇಮ ಬಿಂಬಿಸುವ, ಸಾಮಾಜಿಕ ಜಾಗೃತಿ ಮೂಡಿಸುವಂತಹ, ಭಾರತಿಯ ಸಂಸ್ಕೃತಿ ಅನಾವರಣಕ್ಕೆ ಪೂರಕವಾದ ವಿವಿಧ ಮನೋರಂಜನಾ, ಲಕ್ಕಿ ಜಿ.ಎಸ.ಬಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿAದ ಜರುಗಿದವು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶ್ರೀನಾಥ ಪೈ, ಗುರುದಾಸ್ ಪ್ರಭು, ಪಲ್ಲವಿ ಅರುಣ ಶಾನಭಾಗ, ಚೈತ್ರಾ ಚಂದ್ರಕಾAತ ಕಾಮತ ರವರು ಕಾರ್ಯಕ್ರಮ ನಿರೂಪಿಸಿದರು, ಅನೀಲ ಪೈ ಸ್ವಾಗತಿಸಿದರು, ಉಪಾಧ್ಯಕ್ಷ ಗಿರಿಧರ ನಾಯಕ ವಂದಿಸಿದರು.