ಬೆಂಗಳೂರು : ಸೈರನ್‌ ನೊಂದಿಗೆ ಅಂಬುಲೆನ್ಸ್‌ ಬಂದ್ರೆ ವಾಹನ ಸವಾರರು ದಾರಿ ಬಿಟ್ಟು ಕೊಡುತ್ತಾರೆ. ಹೀಗೆ ಸಾರ್ವಜನಿಕರ ಸಹಾನೂಭೂತಿಯನ್ನೇ ದುರುಪಯೋಗಪಡಿಸಿಕೊಂಡ ನರ್ಸಿಂಗ್ ಕಾಲೇಜೊಂದರ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರವನ್ನು ವೇಗವಾಗಿ ತಲುಪಲು ಅಂಬುಲೆನ್ಸ್‌ ಬಳಸಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಗುರುವಾರ ಟ್ರಾಫಿಕ್ ಪರಿಶೀಲನೆಯಲ್ಲಿದ್ದ ಪೊಲೀಸರಿಗೆ ಸೈರನ್ ಹಾಕಿಕೊಂಡು ಬರುತ್ತಿದ್ದ ಕುಮಾರನ್ಸ್ ಸಂಸ್ಥೆಗೆ ಸೇರಿದ ಅಂಬುಲೆನ್ಸ್‌ ಮೇಲೆ ಸಂಶಯ ಬಂದಿದೆ. ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಒಳಗಡೆ ರೋಗಿ ಬದಲಾಗಿ ನಾಲ್ಕೈದು ವಿದ್ಯಾರ್ಥಿಗಳಿದ್ದರು. ಅಂಬುಲೆನ್ಸ್‌ ಚಾಲಕನನ್ನು ಗದರಿದ ಪೊಲೀಸರು ಏನಯ್ಯ ರೋಗಿ ಯಾರು, ರೋಗಿ ಕಡೆಯವರು ಯಾರು ಎಂದು ಪ್ರಶ್ನಿಸಿದ್ದಾರೆ. ಚಾಲಕ ಉತ್ತರಿಸಲಾಗದೆ ಪರದಾಡಿದ್ದಾನೆ. ಬಳಿಕ ಪೊಲೀಸರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ನಾವು ನರ್ಸಿಂಗ್ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರ ಬೇಗ ತಲುಪಬೇಕಿತ್ತು. ಹೀಗಾಗಿ ಸೈರನ್ ಹಾಕಿಕೊಂಡು ಬಂದಿದ್ದೇವೆ ಎಂದಿದ್ದಾರೆ.

RELATED ARTICLES  ಸಪ್ತಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ಯಶಸ್ವೀ ಸಮಾರೋಪ

ಅಷ್ಟು ಹೊತ್ತಿಗೆ ಪೊಲೀಸರ ಪಿತ್ತ ನೆತ್ತಿಗೇರಿತ್ತು. ಟ್ರಾಫಿಕ್‌ ಪೊಲೀಸರು ಕೆಂಡಾಮಂಡಲವಾಗಿ ಎಕ್ಸಾಂ ಇದ್ರೆ ಬೆಳಗ್ಗೆ 6 ಗಂಟೆಗೆ ಎದ್ದು ಹೋಗ್ರಿ..ಜನರ ಸಿಂಪಥಿ ಪಡೆದು ಯಾಕೆ ಹೀಗೆ ಚೀಟ್ ಮಾಡುತ್ತೀರಿ ಎಂದು ಉಗಿದಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ಅಂಬುಲೆನ್ಸ್‌ ನಿಂದ ಇಳಿಸಿದ್ದಾರೆ. ಬಳಿಕ ರೋಗಿ ಇಲ್ಲವಾದರೂ ಸೈರನ್‌ ಹಾಕಿಕೊಂಡ ಚಾಲಕನನ್ನು ಸಾರ್ವಜನಿರಕ ಸಮ್ಮುಖದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಕೇಸು ದಾಖಲಿಸಿದ್ದಾರೆ.

RELATED ARTICLES  ಗೋ ಸಂರಕ್ಷಕರ ಮೇಲೆ ಹಲ್ಲೆ ಖಂಡಿಸಿದ ಭಾರತೀಯ ಗೋ ಪರಿವಾರ

ಸಾಮಾಜಿಕ ಜಾಲ ತಾಣದಲ್ಲಿ ಪೊಲೀಸರ ಕಾರ್ಯಾಚರಣೆ ಇದೀಗ ವೈರಲ್ ಆಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.