ಅಂಕೋಲಾ : ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಬೆರಡೆ ಗ್ರಾಮದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕೃಷಿ ಕೂಲಿ ಕೆಲಸಗಾರನೊಬ್ಬ ಬೆಂಕಿಯಲ್ಲಿ ಸುಟ್ಟು ಕರಕಲಾದ ಘಟನೆ ವರದಿಯಾಗಿದೆ. ಜೀವ ಬೆಂಕಿಯಲ್ಲಿ ದಹಿಸಿ ಹೋಗುವ ಹೃದಯವಿದ್ರಾವಕ ಘಟನೆ ಎಡಿ ತಾಲೂಕಿನ ಜನತೆಯನ್ನು ಬೆಚ್ಚಿಬಿಳಿಸಿದೆ.
ದಾಮೋದರ್ ನೆಮು ನಾಯ್ಕ್ (70 ) ಮೃತ ದುರ್ದೈವಿಯಾಗಿದ್ದು, ಈತನು ತಮ್ಮ ಮನೆಯ ಹತ್ತಿರವಿರುವ ಮತ್ತೊಬ್ಬರ ಜಮೀನಿನಲ್ಲಿ ಹುಲ್ಲು ಗಿಡ ಗಂಟಿಗಳಿಗೆ ಅತಿಯಾದ ಗಾಳಿಯಿಂದ ಯಾವುದೇ ರೀತಿಯಲ್ಲಿ ಬೆಂಕಿ ಬಿದ್ದಿದ್ದು, ಅದನ್ನು ಆರಿಸಲು ಅಥವಾ ಹತ್ತಿರದ ದೇವಸ್ಥಾನವೊಂದಕ್ಕೆ ಹೋಗಿ ಬರುತ್ತಿದ್ದಾಗ, ಅಥವಾ ಅದಾವುದೋ ಕಾರಣಕ್ಕೆ ಪಕ್ಕದ ಜಮೀನಿಗೆ ಹೋದವನು ಬೆಂಕಿಯಲ್ಲಿ ಸಿಕ್ಕಿ ಹಾಕಿಕೊಂಡು ಸುಟ್ಟು ಮೃತಪಟಿದ್ದು, ಈ ಕುರಿತು ಮೃತನ ಹೆಂಡತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇಲ್ಲಿಗೆ ಹೋಗಿ ಬರಲು ರಸ್ತೆ ಸಂಪರ್ಕ ಸಮಸ್ಯೆಯಿಂದ ಸ್ಥಳೀಯ ನಿವಾಸಿಗಳು, ರೈತ ಕೂಲಿಕಾರರು, ಮಹಿಳೆಯರು ಅತೀವ ಸಂಕಟ ಪಡುತ್ತಿರುವ ನಡುವೆಯೇ, ಮೃತ ದೇಹವನ್ನು ಕಾಲು ದಾರಿಯಲ್ಲಿ ಸುಮಾರು 1 ಕಿ.ಮೀ. ದೂರದ ವರೆಗೆ ನಾಲ್ಕಾರು ಜನ ಭುಜದ ಮೇಲೆ ಹೊತ್ತು ತಂದು ಬಾಳೆಗುಳಿ ಬಳಿಯ ರಾ.ಹೆ. ವರೆಗೆ ಸಾಗಿಸಿ ಬಳಿಕ ರಕ್ಷಕ ವಾಹನದ ಮೇಲೆ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು.