ಸಾಗರ ನಗರಸಭೆಯ ಮಾಜಿ ಅಧ್ಯಕ್ಷ ಎಸ್ ವಿ ಕೃಷ್ಣೂರ್ತಿಯವರ ಕಾರು ಅಪಘಾತಗೊಂಡಿರೋದಾಗಿ ತಿಳಿದು ಬಂದಿದೆ. ಅಲ್ಲದೇ ಅವರ ಸ್ಥಿತಿ ಗಂಭೀರಗೊಂಡಿರೋದಾಗಿ ಹೇಳಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರ ಸಭೆಯ ಮಾಜಿ ಅಧ್ಯಕ್ಷ ಎಸ್ ವಿ ಕೃಷ್ಣಮೂರ್ತಿಯವರ ಕಾರು ಸಾಗರದ ಮಳ್ಳ ಬಳಿ ಅಪಘಾತಗೊಂಡಿದೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -

ಒಮಿನಿ ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ, ನಜ್ಜುಗುಜ್ಜಾಗಿದೆ. ಕಾರು ಅಪಘಾತದಲ್ಲಿ ಸಾಗರ ನಗರಸಭೆ ಮಾಜಿ ಅಧ್ಯಕ್ಷ ಎಸ್ ವಿ ಕೃಷ್ಣಮೂರ್ತಿ ಅವರು ಮುಖದ ಬಲಭಾಗಕ್ಕೆ, ಕಾಲಿಗೆ ಹೆಚ್ಚು ಪೆಟ್ಟಾಗಿದೆ ಎನ್ನಲಾಗಿದೆ. ಸದ್ಯ ಮಾತನಾಡುವ ಸ್ಥಿತಿಯಲ್ಲಿ ಅವರಿಲ್ಲ ಎಂದು ಹೇಳಲಾಗುತ್ತಿದೆ. ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರಗೊಂಡಿದೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

RELATED ARTICLES  ಹಿಂದು ಮತ್ತು ಹಿಂದುಗಳ ಸ್ವಾಭಾವಿಕ ಗುಣ-ಧರ್ಮ (‘ಶ್ರೀಧರಾಮೃತ ವಚನಮಾಲೆ’).