ಬೆಂಗಳೂರು: ರಿಷಭ ಶೆಟ್ಟಿ ಅವರ ನಿರ್ದೇಶನದ ಕಾಂತಾರ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ಈ ಎರಡು ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿ (ಆಸ್ಕರ್)ಗಳ ಸ್ಪರ್ಧೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರರ್ಥ ಚಲನಚಿತ್ರವು ಮುಖ್ಯ ನಾಮನಿರ್ದೇಶನಗಳಿಗೆ ಹೋಗಲು ಆಸ್ಕರ್ ಸದಸ್ಯರು ಮತ ಚಲಾಯಿಸಲು ಇದು ಅರ್ಹವಾಗಿದೆ. ಕಾಂತಾರ ಸಿನೆಮಾ ಆಸ್ಕರ್ ಸ್ಪರ್ಧೆಗೆ ತಡವಾಗಿ ಪ್ರವೇಶ ಪಡೆದಿದೆ. ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಮತ್ತು ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರಗಳು ತಮ್ಮ ಆಸ್ಕರ್ ಪ್ರಯಾಣ ಪ್ರಾರಂಭಿಸಿವೆ. ಕಾಂತಾರ ಅಂತಿಮ ನಾಮನಿರ್ದೇಶನಕ್ಕೆ ಬರುತ್ತದೆಯೇ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.
ರಿಷಭ್ ಶೆಟ್ಟಿಯವರ ಕಾಂತಾರ ಚಲನಚಿತ್ರವು 2022 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಜಾಗತಿಕವಾಗಿ 400 ಕೋಟಿ ರೂಪಾಯಿಗಳನ್ನು ಗಳಿಸಿದ ಈ ಚಿತ್ರವು ಇತ್ತೀಚೆಗೆ ಥಿಯೇಟರ್‌ಗಳಲ್ಲಿ 100 ದಿನಗಳನ್ನು ಪೂರೈಸಿದೆ.
ಕಾಂತಾರ ಸಿನೆಮಾವನ್ನು ಆಸ್ಕರ್ 2023ಕ್ಕೆ ಸಲ್ಲಿಸಲಾಯಿತು ಮತ್ತು ಈಗ ಅದನ್ನು ಎರಡು ವಿಭಾಗಗಳಲ್ಲಿ ಆಯ್ಕೆ ಪಟ್ಟಿಗೆ ಸೇರಿಸಿದೆ. ಕಾಂತಾರ’ ಚಿತ್ರವು 2 ಆಸ್ಕರ್ ಅರ್ಹತೆಗಳನ್ನು ಪಡೆದಿರುವುದನ್ನು ಹಂಚಿಕೊಳ್ಳಲು ನಮಗೆ ಅತೀವ ಸಂತೋಷವಾಗಿದೆ! ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತೇವೆ. ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.
ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಲು ಮತದಾನವು ಜನವರಿ 11 ರಿಂದ ಪ್ರಾರಂಭವಾಗುತ್ತದೆ ಮತ್ತು ಜನವರಿ 17 ರವರೆಗೆ ನಡೆಯುತ್ತದೆ. ಅಂತಿಮ ನಾಮನಿರ್ದೇಶನಗಳು ಜನವರಿ 24ರಂದು ಹೊರಬರುತ್ತವೆ.
ಕಾಂತಾರ ಚಿತ್ರವನ್ನು ರಿಷಬ್ ಶೆಟ್ಟಿ ಬರೆದು, ನಟಿಸಿ, ನಿರ್ದೇಶಿಸಿದ್ದಾರೆ. ಚಿತ್ರವು ಭೂತ ಕೋಲ ಸಂಪ್ರದಾಯದಲ್ಲಿ (ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಆಚರಣೆಯಲ್ಲಿದೆ) ಮತ್ತು ದೇವತೆಯ ಕುರಿತಾದ ಪೌರಾಣಿಕ ಕಥೆಯನ್ನು ಜಾಣತನದಿಂದ ಹೆಣೆಯಲಾಗಿದೆ. ಚಲನಚಿತ್ರದಲ್ಲಿ ರಿಷಬಭ ಶೆಟ್ಟಿ ಅವರಲ್ಲದೆ, ಸಪ್ತಮಿ ಗೌಡ, ಅಚ್ಯುತಕುಮಾರ ಮತ್ತು ಪ್ರಮೋದ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕೆಜಿಎಫ್-2 ಮತ್ತು 777 ಚಾರ್ಲಿ ನಂತರದಲ್ಲಿ ಬಿಡುಗಡೆಯಾದ ಕಾಂತಾರ ಕನ್ನಡ ಚಿತ್ರರಂಗದ ಮುಂದಿನ ದೊಡ್ಡ ಕೊಡುಗೆಯಾಗಿದೆ, ಇದು ಇಡೀ ರಾಷ್ಟ್ರವನ್ನು ಚಲನಚಿತ್ರೋದ್ಯಮವನ್ನು ಗಮನಿಸುವಂತೆ ಮಾಡಿದೆ.
ರಿಷಭ್ ಶೆಟ್ಟಿ ಬರೆದು ನಿರ್ದೇಶಿಸಿರುವ ‘ಕಾಂತಾರ’ ಸೆಪ್ಟೆಂಬರ್ 30 ರಂದು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಯಿತು. ಕರ್ನಾಟಕದಾದ್ಯಂತ ಮತ್ತು ಭಾರತದ ಇತರ ಭಾಗಗಳಲ್ಲಿ ಅನಿರೀಕ್ಷಿತ ಪ್ರತಿಕ್ರಿಯೆಯನ್ನು ನೋಡಿ, ತಯಾರಕರು ಸತತ ವಾರಗಳಲ್ಲಿ ಚಲನಚಿತ್ರವನ್ನು ಇತರ ಭಾಷೆಗಳಿಗೆ ಡಬ್ ಮಾಡಿದರು ಮತ್ತು ‘ಕಾಂತಾರ’ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬ್ಲಾಕ್ಬಸ್ಟರ್ ಆಯಿತು. ಮತ್ತು ಥೀಮ್ ಭಾರತದಾದ್ಯಂತ ಜನರಿಂದ ಮನ್ನಣೆ ಪಡೆಯಿತು.