ಕುಮಟಾ: ಎಲ್ಲರ ಮನೆಗಳೂ ಸಂಸ್ಕಾರದ ಮನೆಯಾಗಲಿ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳು ಆಶಿಸಿದರು. ಬುಧವಾರ ಹೊಸ ಹೆರವಟ್ಟದಲ್ಲಿ ಶ್ರೀಮಹಾಬಲ ಶೋಧ ಸಂಸ್ಥಾನದ ಪರವಾಗಿ ರಂಗ ಮಹಾಬಲ, ಗಾನ ಮಹಾಬಲ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ, ಗುರು ಭಿಕ್ಷ, ಭಾಸ್ಕರ ಹೆಗಡೆ ಸಂಸ್ಮರಣ ನಡೆಸಿ ಆಶೀರ್ವಚನ ನುಡಿದರು. ಗುರುವಿಗಾದರೂ, ಸಂಸ್ಥೆಗೂ, ಸಮಾಜಕ್ಕೂ ಬೇಕು ಎನ್ನುವಂತೆ ಆಗಬೇಕು. ಇನ್ನು ಅನನ್ಯ ಕ್ಷೇತ್ರ, ಸಮಾಜಕ್ಕೆ ಇಂಥ ಮನೆಗಳ ಸಂಖ್ಯೆ ಹೆಚ್ಚಬೇಕು. ಗುರು ಕಾರ್ಯ, ಸಮಾಜ ಕಾರ್ಯಕ್ಕೆ ಒಳಗಾಗಬೇಕು. ಸೀಮೆ ಇಲ್ಲದ ಮನೆಯಾಗಬೇಕು ಎಂದರು.
ಮುಪ್ಪು ಎಂದರೆ ವರ್ಜ್ಯವಲ್ಲ. ಅಂತರಂಗದ ಸಾಧನೆಯ ದರ್ಶನ. ಆ ವೇಳೆಯಲ್ಲಿ ಬದುಕಿನ ಸಾರ ಕಾಣುತ್ತದೆ. ಮಹಾಬಲ ಹೆಗಡೆ ಅವರು, ಭಾಸ್ಕರ ಹೆಗಡೆ ಅವರು ಅವರ ಬದುಕಿನ ಮಾಗಿದ ಕಾಲದಲ್ಲಿ ನೋಡಿದ್ದೇವೆ ಎಂದ ಶ್ರೀಗಳು ಮಹಾಬಲರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುವದೂ ನಮಗೆ ಖುಷಿಯಾಗಿದೆ. ಒಂದು ಮಹಾಬಲ ಐದಾಗಿದ್ದು ಖುಷಿಯಾಗಿದೆ. ಐವರು ಸಾಧಕರೂ ಅನುಭವಿಗಳೇ. ಅವರ ಮೂಲಕ ಇನ್ನಷ್ಟು ರಂಗ ಸಾಕ್ಷಾತ್ಕಾರ ಆಗಲಿ ಎಂದರು.
ಸಂಪ್ರಾರ್ಥನೆ ನಡೆಸಿದ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ, ಅಂತರಂಗ ಬೆಳೆದು ಬಹಿರಂಗಗಕ್ಕೆ ಬರಬೇಕು. ಈ ರಂಗದಿಂದ ಮತ್ತೆ ಅಂತರಂಗಕೆ ರಂಗ ಯಾತ್ರೆ ನಡೆಸಬೇಕು. ಮಗುವಾಗಿ ಮಾಡಿಕೊಳ್ಳುವ ಪ್ರಾರ್ಥನೆ, ಅಬಲರಾದವರು ಮಹಾಬಲರಲ್ಲಿ ಕೇಳಿಕೊಳ್ಳುವಂತೆ. ಹಿಂದೆ ಗುರು ಮುಂದು ಗುರಿ ಇದ್ದರೆ ದಾರಿ ಸರಿ ಇರುತ್ತದೆ ಎಂದರು.
ರಂಗ ಮಹಾಬಲ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕಲಾವಿದ ಕೃಷ್ಣಯಾಜಿ ಬಳ್ಕೂರು, ಕಸಿದು ಹಸಿದು ತಿನ್ನುವ ಈ ಕಾಲದಲ್ಲಿ ಹಂಚಿ ತಿನ್ನುವವರು ಶ್ರೇಷ್ಠರು.ಗುರು ಹಾಗೂ ದೇವರು ಇಬ್ಬರು ಮೊದಲು ಪ್ರತ್ಯಕ್ಷ ಆದರೆ, ಗುರುವಿಗೇ ಮೊದಲೇ ನಮಸ್ಕರಿಸಬೇಕು. ಹರ ಮುನಿದರು ಗುರು ಕಾಯುವನು ಎಂದರು.
ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಯಕ್ಷಗಾನದಲ್ಲಿ ಒಬ್ಬರೇ ಮಹಾಬಲ ಹೆಗಡೆ ಅವರು. ಸಾಹಿತ್ಯ, ಹಾಡುಗಾರಿಕೆ, ಪಾತ್ರ ಕಟ್ಟುವ ರೀತಿ ಅಧ್ಬುತ ಎಂದರು.
ಪ್ರಶಸ್ತಿ ಪುರಸ್ಕೃತ, ನಾಟ್ಯ ವಿನಾಯಕ ದೇವಸ್ಥಾನ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ರಂಗ ಮಹಾಬಲ ಪ್ರಶಸ್ತಿ ಜೀರ್ಣಿಸುಕೊಳ್ಳುವದು ಕಷ್ಟ. ಮಹಾಬಲ ಹೆಗಡೆ ಅವರು ದೊಡ್ಡ ಬಂಢಾರ. ಪದ್ಯ, ಪಾತ್ರದ ಚೌಕಟ್ಟು ಮೀರದಂತೆ ಹೇಳಿಕೊಟ್ಟವರು. ಯಕ್ಷಗಾನದ ಜಗದ್ಗುರುಗಳು ಮಹಾಬಲ ಹೆಗಡೆ ಅವರು ಎಂದರು.
ಗಾನ ಮಹಾಬಲ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಭಾರತ ರತ್ನ ಪ್ರಶಸ್ತಿ ಪಡೆದಕ್ಕಿಂತ ಖುಷಿಯಾಗಿದೆ. ಮಹಾಬಲ ಹೆಗಡೆ ಅವರಂಥವರು ನೂರು ವರ್ಷಕ್ಕೆ ಒಬ್ಬರೂ ಇಲ್ಲ ಎಂದರು.
ಇನ್ನೋರ್ವ ಭಾಗವತ ಜೋಗಿಮನೆ ಗೋಪಾಲಕೃಷ್ಣ ಹೆಗಡೆ, ಶ್ರೀ ಸಂಸ್ಥಾನದಿಂದ ಪ್ರಶಸ್ತಿ ನೀಡಿದ್ದು ಖುಷಿಯಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಮೋಹನ ಹೆಗಡೆ ಭಾಸ್ಕರ ಮಾತನಾಡಿ, ಮಹಾಬಲ ಹೆಗಡೆ ಅವರು ಬಲು ದೊಡ್ಡವರು. ಜೀವನ ಗುರುಗಳು. ಅವರ ಸ್ಮರಣೆ ಕಾರ್ಯ ಮಾಡುತ್ತಿದ್ದೇವೆ ಎಂದರು.
ಶಾಸಕ ಸುನೀಲ ನಾಯ್ಕ, ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ, ಡಾ. ಜಿ.ಎಲ್ ಹೆಗಡೆ ಕುಮಟಾ, ಪಾರ್ವತಿ ಭಾಸ್ಕರ ಹೆಗಡೆ, ಶ್ರೀಕಾಂತ ಹೆಗಡೆ, ನಾಗವೇಣಿ ಹೆಗಡೆ, ಹಂಗಾರಕಟ್ಟೆ ರಾಜಶೇಖರ ಹೆಬ್ಬಾರ್, ನಾರಾಯಣ ಯಾಜಿ, ಗುರುಪ್ರಸಾದ ಶೆಟ್ಟಿ, ಪ್ರಸನ್ನ ಹೆಗಡೆ, ಶಂಭು ಹೆಗಡೆ, ಡಾ. ಗಜಾನನ ಶರ್ಮಾ ಎಂ.ಎನ್. ಹೆಗಡೆ, ಗೋಪಾಲಕೃಷ್ಣ ಭಾಗವತ, ಸತ್ಯ ಭಾಗವತ ಇತರರು ಇದ್ದರು. ಇದೇ ವೇಳೆ ಪ್ರಸಿದ್ಧ ಕಲಾವಿದ ಸಂಜಯಕುಮಾರ ಬಿಳಿಯೂರು ಸಿದ್ದಗೊಳಿಸಿದ ಯಕ್ಷಗಾನ ವೇಷ ಭೂಷಣವನ್ನು ಮೋಹನ ಭಾಸ್ಕರ ಹೆಗಡೆ ಅವರಿಗೆ ಶ್ರೀಗಳ ಮೂಲಕ ನೀಡಿದರು. ವಿಷ್ಣು ಗುಪ್ತ ವಿಶ್ವ ವಿದ್ಯಾಲಯಕ್ಕೆ ಐದು ಲ ರೂ. ಸೆಲ್ಕೋ ಸಿಬಂದಿಗಳು, ಸತ್ಯ ಹಾಸ್ಯಗಾರ ಅವರು ೫೦ ಸಾವಿರ ರೂ. ಶ್ರೀಗಳ ಬಳಿ ನೀಡಿದರು.
ದೈವಜ್ಞ ಸಮುದಾಯದಿಂದ ಫಲ ಸಮರ್ಪಿಸಿದರು. ಮೋಹನ. ಭಾಸ್ಕರ ಹೆಗಡೆ ಸ್ವಾಗತಿಸಿದರು. ಕಥೆಗಾರರಾದ ಪ್ರಮೋದ ಹೆಗಡೆ ನಿರ್ವಹಿಸಿದರು. ಜಗದೀಶ್ ಪೈ, ಡಾ. ಜಿ.ಜಿ ಹೆಗಡೆ, ಡಾ. ಟಿ.ಎನ್. ಹೆಗಡೆ ಇದ್ದರು.
ಎಲ್ಲರನ್ನೂ ಒಂದು ಗೂಡಿಸುವ, ಒಂದಾಗಿಸುವ ಸಂಸ್ಥಾನ. ಅಂಗಳಕ್ಕೆ ಬೆಳದಿಂಗಳಾಗಿ ಗುರು ಬಂದರೆ ಒಳಗೆ ರಾಮನಿರುತ್ತಾನೆ.- ವಿ.ಉಮಾಕಾಂತ ಭಟ್ಟ ಕೆರೇಕೈ, ವಿದ್ಯಾವಾಚಸ್ಪತಿ