ಕುಮಟಾ : ಶಿಕ್ಷಕ, ನಿರೂಪಕ, ಸಾಹಿತಿ ಸಂಕೊಳ್ಳಿಯ ಗಣೇಶ ಜೋಶಿಯವರು ಬರೆದ ಅವಲೋಕನ ಪುಸ್ತಕ ಮುದ್ರಣಗೊಂಡಿದ್ದು, ಪಾಲಕರಿಗೆ ಅತ್ಯುಪಯುಕ್ತವಾಗಬಲ್ಲ ಪುಸ್ತಕದ ಮೊದಲ ಪ್ರತಿಯನ್ನು ಗೋಕರ್ಣದ ಅಶೋಕೆಯಲ್ಲಿ ರಾಮಚಂದ್ರಾಪುರದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರಿಗೆ ಲೇಖಕರು ಸಮರ್ಪಿಸಿದರು. ಈ ಸಂದರ್ಭದಲ್ಲಿ ಪುಸ್ತಕದ ಕುರಿತಾಗಿ ವಿಷಯವಿವರಣೆ ತಿಳಿದ ರಾಘವೇಶ್ವರ ಶ್ರೀಗಳು ಪ್ರತಿಯೊಬ್ಬ ಪಾಲಕರಿಗೂ ಈ ಪುಸ್ತಕ ತಲುಪುವಂತಾಗಲಿ ಎಂದು ಹಾರೈಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವರ್ಣ ಲೇಟೆಕ್ಸ್ನ ಮಾಲೀಕರಾದ ಮಂಜುನಾಥ ಭಟ್ಟ ಸುವರ್ಣಗದ್ದೆ ಇವರು ಪುಸ್ತಕವನ್ನು ಪರಿಚಯಿಸುತ್ತಾ, ಪಾಲಕರು ಅಂಕದ ಹಿಂದೆ ಓಡಲು ಪ್ರಾರಂಭಿಸಿದ್ದಾರೆ. ಮಕ್ಕಳು ಹಣದ ಹಿಂದೆ ಓಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಬೆಳೆಸಲು ಅತ್ಯುಪಯುಕ್ತ ಮಾಹಿತಿಯನ್ನು ಹೊಂದಿರುವ ಪುಸ್ತಕ ಇದು. ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾದಾಗಲೇ ಅದು ಎಲ್ಲರ ಗಮನ ಸೆಳೆದಿತ್ತು. ಇಂದಿನ ಸಾಮಾನ್ಯ ಜನ ಜೀವನದಲ್ಲಿ ಇರುವ ಸಮಸ್ಯೆಗಳು ಹಾಗೂ ಇದರಿಂದ ಮಗುವಿನ ಮುಗ್ದ ಮನಸ್ಸಿನ ಮೇಲೆ ಬೀಳುತ್ತಿರುವ ಪ್ರಭಾವದ ಕುರಿತು ತುಂಬಾ ಉತ್ತಮ ರೀತಿಯಲ್ಲಿ ವಿಷಯ ಮಂಡನೆ ನಡೆದಿದೆ. ಇಂತಹ ಪುಸ್ತಕಗಳನ್ನು ಪಾಲಕರು ಓದುವ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಂಡು ಮಗುವಿನ ಭವಿಷ್ಯ ರೂಪಿಸಲು ಶ್ರಮವಹಿಸಬಹುದು ಎಂದರು.

RELATED ARTICLES  ನೂತನ ಜಿಲ್ಲಾಧಿಕಾರಿಯಾಗಿ ಗಂಗೂಬಾಯಿ ಮಾನಕರ್.

ಲೇಖಕ ಗಣೇಶ ಜೋಶಿ ಮಾತನಾಡಿ, ನುಡಿಜೇನು ಹಾಗೂ ಜನಮಾಧ್ಯಮ ಪತ್ರಿಕೆಗಳಲ್ಲಿ ನಿರಂತರವಾಗಿ ಶೈಕ್ಷಣಿಕ ಸಂಬಂಧಿ ಲೇಖನಗಳು ಪ್ರಕಟಗೊಂಡಿದ್ದು, ಪಾಲಕರೆಯೊಂದಿಗೆ ಪ್ರೀತಿಯ ಮಾತನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಪಾಲಕರಿಗೆ ಉಪಯುಕ್ತವಾದ 25 ಲೇಖನಗಳನ್ನು ಸೇರಿಸಿ ಈ ಕೃತಿಯನ್ನು ಹೊರತಂದಿದ್ದು, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ. ಜಿ.ಎಲ್ ಹೆಗಡೆ ಮುನ್ನುಡಿ ಬರೆದಿದ್ದಾರೆ ಎಂದರು. ಶ್ರೀಗಳು ಮನಸ್ಸಿನಲ್ಲಿ ವಿಷಯವನ್ನು ಸ್ಪುರಿಸಿ ಈ ಪುಸ್ತಕ ಬರೆಸಿದ್ದಾರೆಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಸ್ನಾನದ ಕೋಣೆಯಲ್ಲಿ ಅವಿತು ಕುಳಿತಿದ್ದ ಜವರಾಯ..! ಶಾಕ್ ಹೊಡೆದು ಸಾವು ಕಂಡ ವಿದ್ಯಾರ್ಥಿ.

ಈ ಸಂದರ್ಭದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾ ಪೀಠಮ್ ನ ಗೌರವಾಧ್ಯಕ್ಷರಾದ ದೇವಶೃವ ಶರ್ಮಾ, ಹವ್ಯಕ ಮಹಾಂಡಲದ ಅಧ್ಯಕ್ಷರಾದ ಆರ್.ಎಸ್ ಹೆಗಡೆ ಹರಗಿ, ನಾಗರಾಜ ಭಟ್ಟ ಪೆದುಮಲೆ, ವಿಶ್ವೇಶ್ವರ ಭಟ್ಟ ಉಂಡೆಮನೆ ಇನ್ನಿತರರು ಹಾಜರಿದ್ದರು.

ಪುಸ್ತಕ ಖರೀದಿಸಲು Amazon ಲಿಂಕ್ ಒತ್ತಿ. https://www.amazon.in/dp/8195964117