ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆ ಕುಮಟಾ ಇವರಿಂದ ಮುರ್ಡೇಶ್ವರದಲ್ಲಿ ‘ಲಯನ್ಸ್ ಕ್ಲಬ್ ಮುರ್ಡೇಶ್ವರ’ ದ ಸಹಯೋಗದಲ್ಲಿ ತಾರೀಖು 11- 1-2023 ರಂದು ನಡೆದ ‘ಉಚಿತ ನೇತ್ರ ತಪಾಸಣಾ ಶಿಬಿರ’ ದಲ್ಲಿ ಅಂತೂ 58 ಜನರು ಪಾಲ್ಗೊಂಡು ತಮ್ಮ ನೇತ್ರಗಳನ್ನು ತಜ್ಞ ವೈದ್ಯರಿಂದ ತಪಾಸಣೆಗೈಸಿಕೊಂಡರು.
ಈ ಪೈಕಿ “ಮೋತಿಬಿಂದು ಶಸ್ತ್ರ ಚಿಕಿತ್ಸೆ”ಗೆ ಆಯ್ಕೆಯಾದ ಅಂತೂ 14 ಅರ್ಹ ಫಲಾನುಭವಿಗಳನ್ನು ಕುಮಟಾದಲ್ಲಿನ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಕರೆತಂದು ತಾರೀಖು 12-1-2023 ರಂದು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಮರುದಿನ(ತಾ.13-1-2023 ರಂದು) ಇವರನ್ನೆಲ್ಲ ಕುಮಟಾ ಆಸ್ಪತ್ರೆಯಿಂದ ಬೀಳ್ಕೊಟ್ಟು ಮುರ್ಡೇಶ್ವರಕ್ಕೆ ವಾಪಸ್ ಕರೆದೊಯ್ದು ಬಿಟ್ಟು ಬರಲಾಯಿತು.
ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ, ಔಷಧೋಪಚಾರ, ಊಟೋಪಹಾರ,ವಸತಿ ಹಾಗೂ ಸಾರಿಗೆ ವ್ಯವಸ್ಥೆ ಗಳು ಸಂಪೂರ್ಣ ಉಚಿತವಾಗಿದ್ದವು.
- jb.