ಕುಮಟಾ: ಜೈಲಿನಿಂದ ತಪ್ಪಿಸಿಕೊಂಡು ಇನ್ನೊಂದು ದರೋಡೆಗೆ ಪ್ಲಾನ್ ಮಾಡುತ್ತಿದ್ದ ಅಂತರರಾಜ್ಯ ಕೈದಿಯನ್ನು ಆತನ ಸಹಚರನೊಂದಿಗೆ ಪೊಲೀಸರು ಪಟ್ಟಣದ ಉಪ್ಪಾರಕೇರಿ ಬಳಿ ಬಂಧಿಸುವ ಮೂಲಕ ಅವರ ಬಳಿ ಇದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಉಪ್ಪಾರಕೇರಿ ಬಳಿ ನಸುಕಿನ ಜಾವ 4 ಗಂಟೆ ಸುಮಾರಿಗೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಗಸ್ತಿನಲ್ಲಿದ್ದ ಪೊಲೀಸರಿಗೆ ಅನುಮಾನ ಬಂದಿದೆ. ತಕ್ಷಣ ಅವರನ್ನು ವಿಚಾರಿಸಿದಾಗ ಶಂಕೆ ಮೂಡಿದೆ. ಹಾಗಾಗಿ ಅವರಿಬ್ಬರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅವರ ಬಳಿ ಅಗಲವಾಗಿ ಹರಿತವಿರುವ ಎರಡು ಸ್ಟೀಲ್ ಲೀವರ್‌ಗಳು ಮತ್ತು ದೊಡ್ಡ ಗಾತ್ರದ ಎರಡು ಸ್ಕೂಡ್ರೈವರ್ ಕಂಡುಬAದಿದೆ. ತಕ್ಷಣ ವರ್ಕ್ ಶುರು ಮಾಡಿದ ಪೊಲೀಸರಿಗೆ ಈತನು ಅಜಿತ ದನಗ (32) ಎಂದು ತಿಳಿದು ಬಂದಿದೆ. ಈತನು ಕುಖ್ಯಾತ ಕಳ್ಳನಾಗಿದ್ದು, ಮಹಾರಾಷ್ಟ್ರ, ಕರ್ನಾಟಕದಲ್ಲಿ ಕಳ್ಳತನ ದರೋಡೆಯಂತಹ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

RELATED ARTICLES  ನಿಯಂತ್ರಣ ತಪ್ಪಿ ಕಾರು ಪಲ್ಟಿ..!

ಮನೆ, ಬ್ಯಾಂಕುಗಳು, ಫೈನಾನ್ಸ್ಗಳ ದರೋಡೆ ಮಾಡುವುದೇ ಈತನ ಕೃತ್ಯವಾಗಿದೆ. ಈತನ ಜೊತೆಗೆ ಸೈಯ್ಯದ ಸಲಾವುದ್ದೀನ್ ಸೈಯ್ಯದ ಯುಸೂಫ್ ಕೂಡ ಬಂಧಿಸಲಾಗಿದೆ. ಈತನು ಶಿವಮೊಗ್ಗದ ಸಾಗರ ನಿವಾಸಿಯಾಗಿದ್ದಾನೆ.
ಅಜಿತ್ ದನಗರ್ ಮೇಲೆ 50ಕ್ಕೂ ಹೆಚ್ಚು ದರೋಡೆ ಪ್ರಕರಣಗಳಿದ್ದು, ನ್ಯಾಯಾಲಯ ಈತನಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಜೈಲಿನಿಂದ ತಪ್ಪಿಸಿಕೊಂಡ ಈತನು ತಲೆಮರೆಸಿಕೊಂಡಿದ್ದ. ಈಗ ಗೋವಾಕ್ಕೆ ದರೋಡೆಗೆಂದು ತೆರಳುತ್ತಿರುವಾಗ ಕುಮಟಾ ಪೊಲೀಸರ ಕೈಗೆ ಸಿಕ್ಕಿ ಮತ್ತೆ ಜೈಲು ಸೇರುವಂತಾಗಿದ್ದಾನೆ. ಆತನ ಜೊತೆಗೆ ಇನ್ನೊಬ್ಬ ಸಹಚರ ಕೂಡ ಪೊಲೀಸ್ ಅತಿಥಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸರು ಜೈಲಿನಿಂದ ತಪ್ಪಿಸಿಕೊಂಡ ಕೈದಿಯು ಇನ್ಯಾವುದಾದರೂ ಕಳ್ಳತನ, ದರೋಡೆಯಂತಹ ಪ್ರಕರಣದಲ್ಲಿ ಶಾಮೀಲಾಗಿದ್ದಾರೋ ಎಂಬುದನ್ನು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಹೊನ್ನಾವರದಲ್ಲಿ ಗೋ ಕಳ್ಳತನ ಯತ್ನ: ತಡೆಯಲು ಹೋದವರ ಮೇಲೆಯೂ ಹಲ್ಲೆ