ಸಾಮಾನ್ಯವಾಗಿ ಹೂದೋಟಗಳಲ್ಲಿ, ಗದ್ದೆ ಬದಿ, ಗುಡ್ಡ ಎಲ್ಲೆಂದರಲ್ಲಿ ಕಾಣಸಿಗುವ ಪುಟ್ಟ ಗಿಡ ಗರಿಕೆ. ಸಣ್ಣಗೆ, ಉದ್ದಕ್ಕೆ ಸೂಜಿಯಂತಹ ಉದ್ದುದ್ದ ಎಲೆಗಳನ್ನು ಹೊಂದಿರುವ ಗರಿಕೆ ಹುಲ್ಲಿನಲ್ಲಿರುವ ಅತ್ಯುತ್ತಮ ಔಷಧೀಯ ಗುಣಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ.
ಗರಿಕೆ ಹುಲ್ಲಿನ ರಸ ತೆಗೆದು ದಿನವೂ ಖಾಲಿ ಹೊಟ್ಟೆಯಲ್ಲಿ ಎರಡು ಚಮಚದಷ್ಟು ಸೇವಿಸುತ್ತಾ ಬಂದರೆ ನರಗಳ ಚೈತನ್ಯ ಹೆಚ್ಚುವುದರೊಂದಿಗೆ ದೇಹದ ಬೊಜ್ಜು ಕರಗುತ್ತದೆ.
ಒಂದು ಲೋಟ ಹಾಲಿಗೆ ಕೊಬ್ಬರಿ ಎಣ್ಣೆಯೊಂದಿಗೆ ಕುದಿಸಿ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಬೇಕು. ಹೀಗೆ ಮಾಡುತ್ತಾ ಬಂದರೆ ಕೂದಲು ಉದುರುವಿಕೆ ತಡೆಗಟ್ಟಬಹುದು.
ಗರಿಕೆಯನ್ನು ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿ ಗಾಯವಾದ ಜಾಗಕ್ಕೆ ಹಚ್ಚಿದರೆ, ಬೇಗನೇ ವಾಸಿಯಾಗುತ್ತದೆ. ಇಷ್ಟೇ ಅಲ್ಲದೆ ಗರಿಕೆಯು ಹೃದ್ರೋಗ, ಮಧುಮೇಹ, ರಕ್ತದೊತ್ತಡ ಮುಂತಾದ ಕಾಯಿಲೆಗಳಿಗೂ ಪರಿಣಾಮಕಾರಿ ಔಷಧ.
ಹೀಗಾಗಿ ಎಲ್ಲ ಕಾಲದಲ್ಲೂ ದೊರೆಯುವ ಈ ಗಿಡಗಳನ್ನು `ಹಿತ್ತಲಗಿಡ ಮದ್ದಲ್ಲ’ ಎಂಬಂತೆ ತಿರಸ್ಕರಿಸದೆ ಪುರಸ್ಕರಿಸಿ, ಉಳಿಸಿ, ಬೆಳೆಸಿ, ಬಳಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.