ಯಲ್ಲಾಪುರ : ಯಲ್ಲಾಪುರ ಮತ್ತು ಅಂಕೋಲಾ ನಡುವೆ ಬರುವ ಸುಂಕಸಾಳ NH 63 ಅಲ್ಲಿ ಇಂದು ಎರಡು ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಒಂದು ಕೋಕ್ ಮತ್ತೊಂದರಲ್ಲಿ ಕರ್ಬುಜ ತುಂಬಿದ ಲಾರಿಗಳಾಗಿದ್ದವು ಎಂದು ವರದಿಯಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಅದಲ್ಲದೆ ರಸ್ತೆ ಸಂಚಾರ ಸಹಿತ ಅಸ್ತವ್ಯವ್ತವಾಗಿತ್ತು.
ಕೋಕ್ ಲಾರಿಯು ರಸ್ತೆ ಮಧ್ಯದಲ್ಲಿ ತಲೆಕೆಳಗಾಗಿ ಬಿದ್ದಿದ್ದು ಯಲ್ಲಾಪುರ ಮತ್ತು ಅಂಕೋಲಾ ರಸ್ತೆ ಸಂಚಾರ ಅಸ್ತವ್ಯಸ್ತ ಗೊಂಡಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅಂಕೋಲಾ ಪೊಲೀಸ್ ಅಧಿಕಾರಿಗಳು ತಕ್ಷಣ ಆ ಸ್ಥಳಕ್ಕೆ ಬಂದಿದ್ದಾರೆ. ಕೋಕ್ ತುಂಬಿದ ಲಾರಿ ಡ್ರೈವರ್ ಸ್ಥಿತಿ ಗಂಭೀರ ವಾಗಿದೆ.