ಅಂಕೋಲಾ : ಅಂಕೋಲಾದಿಂದ ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ಗುಜರಿ ಸಾಗಿಸುತ್ತಿದ್ದ ಪಿಕ್ ಅಪ್ ವಾಹನ ಮತ್ತು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಮಾರ್ಗವಾಗಿ ಸಾಗುತ್ತಿದ್ದ ಲಾರಿಯ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತ ರಾ.ಹೆ. 63 ರ ಹೆಬ್ಬುಳ ಬಳಿ ಸಂಭವಿಸಿದೆ. ಭೀಕರ ರಸ್ತೆ ಅಪಘಾತದಲ್ಲಿ, ಪಿಕಪ್ ವಾಹನದ ಸಹಾಯಕ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಪಿಕ್ ಅಪ್ ವಾಹನದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದಿಲ್ಲಿ ಮೂಲದ ಸದ್ಯ ಹುಬ್ಬಳ್ಳಿಯಲ್ಲಿ ಕೆಲಸಕ್ಕೆ ಇದ್ದ ಎನ್ನಲಾದ ಸುಬಾನ್ ಸಿದ್ದಕಿ ಎಂಬಾತನಿಗೆ ಹೊಟ್ಟೆ, ಕುತ್ತಿಗೆ ಮತ್ತಿತರ ಅಂಗಾಗಗಳಿಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.
ಜಖಂಗೊಂಡ ಪಿಕಪ್ ವಾಹನದಲ್ಲಿ ಸಿಕ್ಕಿಬಿದ್ದು ಜೀವನ್ಮರಣದ ನಡುವೆ ಸಂಕಟ ಪಡುತ್ತಿದ್ದ ಚಾಲಕ ಮೊಯಿದ್ದೀನ್ ಅವರನ್ನು ಅವರ್ಸಾ ಮೂಲದ ಓರ್ವರು , ಅದೇ ಮಾರ್ಗವಾಗಿ ಬರುತ್ತಿದ್ದ ಅಂಕೋಲಾದ ರಿಜ್ವಾನ ಸೇರಿದಂತೆ ಸ್ಥಳೀಯರ ಸಹಕಾರ ಪಡೆದು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.