ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆಯುವ ಸಾಂಪ್ರದಾಯಿಕ ಹೋರಿ ಬೆದರಿಸುವ ಎರಡು ಪ್ರತ್ಯೇಕ ಸ್ಪರ್ಧೆಗಳಲ್ಲಿ ಇಬ್ಬರು ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ. ಜನವರಿ 14 ಭಾನುವಾರ ಹೋರಿ ತಿವಿದಿದ್ದರಿಂದ ಶಿಕಾರಿಪುರದ ರಂಗನಾಥ್ (24) ಹಾಗೂ ಕೊನಹನವನಹಳ್ಳಿಯ ಲೋಕೇಶ್ (32) ಮೃತಪಟ್ಟ ದುರ್ದೈವಿಗಳು.
ಶಿಕಾರಿಪುರದ ಶಿರಾಳಕೊಪ್ಪ ಬಳಿಯ ಮಳ್ಳೂರು ಗ್ರಾಮದ ಬಳಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ರಂಗನಾಥ್ ಗಂಭೀರವಾಗಿ ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಕೊನಗನವಹಳ್ಳಿ ನಡೆದ ಮತ್ತೊಂದು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಎದೆಗೆ ತಿವಿದಿದ್ದರಿಂದ ಲೋಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು.