ಬಂಟ್ವಾಳ ಬಿಜೆಪಿ ಪಾದಯಾತ್ರೆ ಹಿನ್ನೆಲೆಯಲ್ಲಿ ತೆಲಂಗಾಣದಿಂದ ಬಂದಿದ್ದ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಘಟನೆಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನರಹರಿ ಪರ್ವತದ ಬಳಿ ನಡೆದಿದೆ. ಕಲ್ಲಡ್ಕ ಕಡೆಗೆ ತೆರಳುತ್ತಿದ್ದ ಬಿಜೆಪಿಯ ಪ್ರಚಾರ ವಾಹನಕ್ಕೆ ಕಲ್ಲಡ್ಕದಿಂದ ಮೆಲ್ಕಾರ್ ಕಡೆಗೆ ತೆರಳುತ್ತಿದ್ದ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ವಿಜಿತ್(35) ಮೃತಪಟ್ಟಿದ್ದಾನೆ. ಅಪಘಾತದ ತೀವ್ರತೆಗೆ ಬೈಕ್ ನಿಂದ ಎಸೆಯಲ್ಪಟ್ಟ ಸವಾರ ಮೃತಪಟ್ಟಿದ್ದು, ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ವಿಜಿತ್ ಮೃತಪಟ್ಟಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಗ್ರಾಮ ವಿಕಾಸ ಪಾದಯಾತ್ರೆಗಾಗಿ ಈ ವಾಹನವನ್ನು ತೆಲಂಗಾಣದಿಂದ ತರಿಸಲಾಗಿತ್ತು. ಇದೇ ವಾಹನದಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಗುಜರಾತ್ ಚುನಾವಣಾ ಪ್ರಚಾರ ನಡೆಸಿದ್ದರು.
ತೆಲಂಗಾಣದಿಂದ ಬಂಟ್ವಾಳ ಬಿಜೆಪಿ ಪಾದಯಾತ್ರೆಯ ಪ್ರಚಾರಕ್ಕೆ ಆಗಮಿಸಿದ್ದ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ಉಳಿಪ್ಪಾಡಿಗುತ್ತು ಅವರು ಆಸ್ಪತ್ರೆಗೆ ಬೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಆದಿತ್ಯವಾರ ವಿಟ್ಲಪಡ್ನೂರು ಮಲರಾಯ ದೈವಸ್ಥಾನದ ಬಳಿ ಪಾದಾಯಾತ್ರೆಯ ಸಭಾ ಕಾರ್ಯಕ್ರಮ ಮುಗಿಸಿ ರಾತ್ರಿ ವಗೆನಾಡು ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ತಂಗಿದ್ದರು. ಆದರೆ ಇಂದು ಪ್ರಚಾರದ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ದಾಖಲಾದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಶಾಸಕರು ತಂಗಿದ್ದ ಮನೆಯಿಂದ ನೇರವಾಗಿ ಆಸ್ಪತ್ರೆಗೆ ಬೇಟಿ ನೀಡಿದ್ದಾರೆ.