ಹೊನ್ನಾವರ :ಕಡುಬಡವರೂ ಕೂಡಾ ಹೊಗೆಯುಕ್ತ ಒಲೆಗಳಿಂದ ಮುಕ್ತಿಹೊಂದಿ ಎಲ್ಪಿಜಿ ಗ್ಯಾಸ್ ಬಳಸಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ ನೇತ್ರತ್ವದ ಕೇಂದ್ರ ಸರಕಾರ ಜಾರಿಗೆ ತಂದ ಉಜ್ವಲ ಯೋಜನೆಯು ಅತ್ಯಂತ ಜನಪರ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಹೇಳಿದರು. ಹೊನ್ನಾವರ ತಾಲೂಕಿನ ಹಳದಿಪುರದ ಗೋಪಿನಾಥ ದೇವಸ್ಥಾನದ ಸಭಾಭವನದಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದಿಂದ ಕೇಂದ್ರದ ಉಜ್ವಲ ಯೋಜನೆಯಡಿ 15 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ಗಳೊಂದಿಗೆ ಟ್ರಸ್ಟ್ ನ ವತಿಯಿಂದ ಉಚಿತ ಲೈಟರಗಳನ್ನು ವಿತರಿಸುತ್ತಾ ಮಾತನಾಡಿದ ಅವರು ಹೊಗೆಯಿಂದ ತಾಯಂದಿರ ಸ್ವಾಸ್ಥ್ಯ ಕೆಡುತ್ತಿರುವುದಲ್ಲದೇ ಉರುವಲಿಗಾಗಿ ಪರಿಸರ ನಾಶವಾಗುತ್ತಿರುವುದನ್ನು ಮನಗಂಡ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಇಂತಹ ಜನೋಪಯೋಗಿ ಯೋಜನೆಯನ್ನು ಜನಸಾಮಾನ್ಯರು ಹಣ, ಸಮಯ ವ್ಯಯಿಸದೇ ಸುಲಭವಾಗಿ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯ ನಿರ್ವಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಕೇಂದ್ರ ಸರಕಾರ ಇನ್ನೂ ಹತ್ತು ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತರಲಿದ್ದು ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲ ಹೆಚ್ಚಿನ ಶ್ರಮ ವಹಿಸುತ್ತೇವೆ ಎಂದರು.

RELATED ARTICLES  ಮತ್ತೆ ಉತ್ತರ ಕನ್ನಡದಲ್ಲಿ ಕೊರೋನಾ ರಣಕೇಕೆ.. ಹೆಚ್ಚಿದೆ ಪ್ರಕರಣಗಳ ಸಂಖ್ಯೆ

IMG 20171006 WA0002
ಮುಖಂಡರಾದ ದಿನಕರ ಶೆಟ್ಟಿ ಯವರು ಮಾತನಾಡಿ ಇದೇ ಕಾರ್ಯಕ್ರಮ ಕಾಂಗ್ರೆಸ್ಸಿಗರ ಕೈಗೆ ಸಿಕ್ಕಿದಲ್ಲಿ ಅವರು ಇದಕ್ಕೆ ಕಮಿಷನ್ ಪಡೆದುಕೊಂಡು ಕೆಲಸ ಮಾಡುತ್ತಿದ್ದರು ಆದರೆ ನಮ್ಮ ನಿಷ್ಠಾವಂತ ಕಾರ್ಯಕರ್ತರು ಯಾರಿಂದಲೂ ಒಂದು ರೂಪಾಯಿ ಸಹ ಪಡೆಯದೇ ಬಡವರ ಸಮಯ ವ್ಯರ್ಥವಾಗದಂತೆ ಸುಲಭವಾಗಿ ಗ್ಯಾಸ್ ಕಿಟ್ ಗಳನ್ನು ವರ ಮನೆಬಾಗಿಲಿಗೆ ತಲುಪಿಸಿದ್ದಾರೆ. ಅಲ್ಲದೇ ಉಚಿತವಾಗಿ ಲೈಟರಗಳನ್ನು ವಿತರಿಸುತ್ತಿರುವ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರ ಕಾರ್ಯವನ್ನು ಶ್ಲಾಘಿಸಿದರು.
ಸೂರಜ ನಾಯ್ಕ ಸೋನಿಯವರು ಮಾತನಾಡಿ ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅವುಗಳನ್ನು ಬಡವರಿಗೆ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಬೇಕೆಂದು ಕರೆ ನೀಡಿದರು.
ಗ್ಯಾಸ್ ವಿತರಕರ ಪರವಾಗಿ ಆಗಮಿಸಿದ ಮಂದಾರ ಗ್ಯಾಸ್ ಏಜೆನ್ಸಿಯ ಮಾಲಕರಾದ ಲಕ್ಷ್ಮೀನಾರಾಯಣ ಭಟ್ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಈ ಯೋಜನೆಯ ಸೌಲಭ್ಯ ಎಲ್ಲರಿಗೂ ದೊರೆಯಲಿದೆ ಆದರೆ ಸ್ವಲ್ಪ ಸಮಯ ಬೇಕಾಗುವುದು ಎಂದು ಗ್ಯಾಸ್ ಬಳಕೆಯ ಸುರಕ್ಷತೆಯ ಕುರಿತಾಗಿ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ ಸುಬ್ರಾಯ ನಾಯ್ಕರವರು ಮಾತನಾಡಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಿಬ್ಬಂದಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಈ ಯೋಜನೆಯ ಅನೂಕೂಲತೆಯನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವುದಲ್ಲದೇ ಉಚಿತವಾಗಿ ಲೈಟರಗಳನ್ನೂ ವಿತರಿಸುತ್ತಿರುವ ನಾಗರಾಜ ನಾಯಕ ತೊರ್ಕೆಯವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

RELATED ARTICLES  ಹೊನ್ನಾವರ ತಾಲೂಕಿನಲ್ಲಿ 80 ಕ್ಕೂ ಹೆಚ್ಚು ಶಿಕ್ಷಕರನ್ನು ಬಿ.ಎಲ್.ಓ ಕರ್ತವ್ಯಕ್ಕೆ ನೇಮಿಸಲಾಗಿದೆ : ಇದರಿಂದ ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ : ಮನವಿ ಸಲ್ಲಿಸಿದ ಶಿಕ್ಷಕರು.

ಫಲಾನುಭವಿಗಳಾದ ಹಳದಿಪುರದ ಮೋಹಿನಿ ಹನುಮಂತ ಉಪ್ಪಾರ, ಸುಮಿತ್ರಾ ನಾಗಪ್ಪ ಅಂಬಿಗ, ಗಂಗೆ ಮಂಜುನಾಥ ಗೌಡ, ಶೋಭಾ ರಾಮಾ ಗೌಡ, ದೇವಿ ಈರು ಗೌಡ, ಕಲ್ಪನಾ ಮಂಜುನಾಥ ಪಟಗಾರ, ಸವಿತಾ ನಾಗರಾಜ ಹರಿಕಂತ, ಭವಾನಿ ದಿನಕರ ನಾಯ್ಕ, ತುಳಸಿ ಮಾಬ್ಲು ಗೌಡ, ಪಾರ್ವತಿ ದೇವು ಮುಕ್ರಿ ಮತ್ತು ಕರ್ಕಿಯ ಸುಬ್ಬಿ ಲಕ್ಷ್ಮಣ ಗೌಡ, ಗಣಪಿ ಭರಮ ಗೌಡ, ಪಾರ್ವತಿ ಗೌಡ, ಲಕ್ಷ್ಮಿ ಗಣಪತಿ ನಾಯ್ಕ, ನಾಗವೇಣಿ ಕೃಷ್ಣ ನಾಯ್ಕ ಇವರುಗಳಿಗೆ ಉಚಿತ ಸಿಲಿಂಡರ, ಲೈಟರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರುಗಳಾದ ದಿನಕರ ಶೆಟ್ಟಿ, ವೆಂಕಟ್ರಮಣ ಹೆಗಡೆ, ಡಾ|| ಜಿ.ಜಿ.ಹೆಗಡೆ, ಸೂರಜ ನಾಯ್ಕ ಸೋನಿ, ಗಾಯತ್ರಿ ಗೌಡ, ಉಮೇಶ ನಾಯ್ಕ, ರಾಜು ಭಂಡಾರಿ, ಮಂಜುನಾಥ ನಾಯ್ಕ, ಲಕ್ಷ್ಮೀನಾರಾಯಣ ಭಟ್, ಅಜಿತ ನಾಯ್ಕ, ಚಿದಾನಂದ ನಾಯ್ಕ, ಗಣಪತಿ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು. ರತ್ನಾಕರ ನಾಯ್ಕರವರು ಸ್ವಾಗತಿಸಿ ವಂದಿಸಿದರು.