ಹೊನ್ನಾವರ : ತಾಲೂಕಿನ ಚಿತ್ತಾರದ ಮುಂಡಾರ ಸಮೀಪ ಇಂದು ಬೆಳಿಗ್ಗೆ 8 ರ ಸುಮಾರಿಗೆ ತನ್ನ ಊರಾದ ಹಡಿಕಲ್ ಇಂದ ಹೊನ್ನಾವರಕ್ಕೆ ಬರುವಾಗ ಚಿತ್ತಾರದ ಮುಂಡಾರದ ಸಮೀಪ ಬುಲೇರೋ ವಾಹನಕ್ಕೆ ತಾಗಿ ಸುಬ್ರಮಣ್ಯ ಗೌಡ ಮೃತನಾಗಿದ್ದಾನೆ ಎನ್ನುವ ಸುದ್ದಿ ಕೇಳಿ ಬಂದಿದೆ. ಆದರೆ ಬುಲೆರೋ ವಾಹನ ಅಲ್ಲಿಂದ ಪರಿಯಾಗಿದೆ, ಅದರ ಶೋಧನೆಗೆ ಪೊಲೀಸರು ಬಲೆ ಬಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತ ಸುಬ್ರಮಣ್ಯ ಗೌಡ ಹಡಿಕಲ್ಲಿನ ತಿಮ್ಮಪ್ಪ ಗೌಡರ ಮಗನಾಗಿದ್ದು, ಹೊನ್ನಾವರದ ಬಸ್ ಸ್ಟಾಂಡ್ ಹತ್ತಿರ ಸ್ಟುಡಿಯೋದಲ್ಲಿ ಕೆಲಸ ಮಾಡುತಿದ್ದ ಎನ್ನುವುದು ಬಲ್ಲ ಮೂಲದಿಂದ ತಿಳಿದು ಬಂದಿದೆ.
ಮನೆಯಲ್ಲಿ ಒಬ್ಬನೇ ಗಂಡು ಮಗನಾಗಿದ್ದ ಸುಬ್ರಮಣ್ಯ ಒಳ್ಳೆಯ ಗುಣ ನಡತೆಯ ಸ್ಪುರದ್ರೂಪಿ ಯುವಕನಾಗಿದ್ದು, ಸ್ನೇಹಿತನ್ನು ಕಳೆದು ಕೊಂಡು ಅನೇಕರು ದುಃಖ ಪಡುತ್ತಿರುವ ಮತ್ತು ಕೇಳಿ ಬರುತ್ತಿದೆ. ಜೀವದ ದಾರಿಯಲ್ಲಿ ಸ್ವ ದುಡಿಮೆಯಿಂದ ಬದುಕು ಕಟ್ಟಿಕೊಳ್ಳಲು ಹೋರಟಾಗ, ಮರಣವೆಂಬ ವಿಧಿ ಅಡ್ಡ ಗಟ್ಟಿ ನಿಲ್ಲುವ ಪರಿ ನೋವ ತರಿಸುತ್ತಿದೆ.