ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ದ ಶ್ರೀ ಉಪ್ಪಲೆ ಮಹಾಲಿಂಗೇಶ್ವರ ದೇವಾಲಯದಲ್ಲಿ ಶ್ರೀ ದೇವರ ಮಹಾ ರಥೋತ್ಸವ,ಸೋಮವಾರ ಮತ್ತು ಹರಕೆ ಪುಷ್ಪ ರಥೋತ್ಸವ ರವಿವಾರದಂದು ಅದ್ದೂರಿಯಾಗಿ ನೆರವೇರಿತು. ಸಂಕ್ರಾಂತಿಯಂದು ದೇವಾಲಯದಲ್ಲಿ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳು ಹಾಲಕ್ಕಿ ಸಮಾಜದ ಜಟಕೇಶ್ವರ ದೇವಾಲಯಕ್ಕೆ ತೆರಳಿ ಹಾಲಕ್ಕಿ ಹಾಗು ಮಡಿವಾಳ ಸಮಾಜದವರಿಗೆ ದೇವಾಲಯದ ಮೊಕ್ತೇಸರರಿಂದ ಆಹ್ವಾನ ನೀಡುವುದರೊಂದಿಗೆ ಆರಂಭವಾಗಿ ರವಿವಾರ ಪಲ್ಲಕ್ಕಿ ಉತ್ಸವ ಮತ್ತು ತಮ್ಮ ಇಷ್ಟಾರ್ಥಗಳನ್ನ ಪೂರೈಸಲು ಶ್ರೀ ದೇವರಲ್ಲಿ ಹೆಳಿಕೆ ಮಾಡಿಕೊಂಡ ಪುಷ್ಟ ರಥೋತ್ಸವ ಸಂಬ್ರಮದಿಂದ ನೆರವೇರಿತು.
ಸೋಮವಾರದಂದು ಶ್ರೀ ದೇವರಿಗೆ ಪಾರಂಪರಿಕ ವಿದಿ ವಿಧಾನದೊಂದಿಗೆ ಪೂಜೆಗಳು, ಹರಿಕೆ ತುಲಾಭಾರ ಸೇರಿದಂತೆ ಹಲವು ಕಾರ್ಯಕ್ರಮಗಳು ಊರಿನ ಪರ ಊರಿನ ಭಕ್ತರ ಸಹಕಾರದೊಂದಿಗೆ ನೆರವೇರಿತು , ರಾತ್ರಿ ರಥೋತ್ಸವದ ನಂತರ ಸಿಡಿಮದ್ದು ಸೇವೆ , ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಸಿದ್ದವಾದ ಹಾಲಕ್ಕಿ ಸಮಾಜದವರ ಅದ್ದೂರಿ ಶಿವನ ಹಗರಣ ಸೇವೆ ಸಹಸ್ರ ಸಹಸ್ರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.