ದಿನಾಂಕ: ೧೭-೦೧-೨೦೨೩ ರಂದು ಶ್ರೀ ಭಾರತೀ ಆಂಗ್ಲ ಮಾದ್ಯಮ ಶಾಲೆ ಕವಲಕ್ಕಿಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶ್ರೀ ವಸಂತ ಭಟ್, ತರಂಗ ಎಲೆಕ್ಟ್ರಾನಿಕ್ಸ್ ಕುಮಟಾ ಹಾಗೂ ಶ್ರೀ ಪ್ರಶಾಂತ ಹೆಗಡೆ ಮೂಡಲಮನೆ, ಖ್ಯಾತ ನಿರೂಪಕರು ಹಾಗೂ ಎಸ್.ಡಿ.ಎಮ್ ಮಹಾವಿದ್ಯಾಲಯದ ಉಪನ್ಯಾಸಕರು ಆಗಮಿಸಿದ್ದರು. ಹಾಗೂ ವೇದಿಕೆಯ ಮೇಲೆ ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಉಮೇಶ್ ವಿ. ಹೆಗಡೆ ಅಬ್ಳಿ ಮತ್ತು ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ್ನ ಗೌರವ ಅಧ್ಯಕ್ಷರಾದ ಶ್ರೀ ವಿ.ಜಿ.ಹೆಗಡೆ ಗುಡ್ಗೆ ಉಪಸ್ಥಿತರಿದ್ದರು. ಹಾಗೂ ಮುಗ್ವಾ ಪಂಚಾಯತ ಸದಸ್ಯರಾದ ಶ್ರೀ ರಾಮ ಗೌಡ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಎಮ್.ಎಸ್.ಹೆಗಡೆ ಉಪಸ್ಥಿತರಿದ್ದರು.
ಅತಿಥಿಗಳಾದ ಪ್ರಶಾಂತ ಹೆಗಡೆಯವರು ಮಕ್ಕಳಿಗೆ ನೀತಿ ಕಥೆಗಳನ್ನು ಹೇಳುತ್ತಾ ನಾವು ದೊಡ್ಡವರಾದ ಮೇಲೆ ಏನಾಗಬೇಕೆಂಬುದನ್ನು ಹೇಗೆ ನಿರ್ಧರಿಸಬೇಕೆಂಬುದನ್ನು ತಿಳಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ವಸಂತ ಭಟ್ ರವರು ಮಾತನಾಡಿ ನಾವು ಹೇಗೆ ಶ್ರಮ ಪಟ್ಟು ಮೇಲೆ ಬರಬೇಕೆಂಬುದನ್ನು ತಿಳಿಸಿದರು.
ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ್ ನ ಗೌರವ ಅಧ್ಯಕ್ಷರಾದ ಶ್ರೀ ವಿ.ಜಿ. ಹೆಗಡೆಯವರು ಮಾತನಾಡಿ ಸೋಲು ಗೆಲುವನ್ನು ಹೇಗೆ ಸಮಾನವಾಗಿ ಸ್ವೀಕರಿಸಬೇಕೆಂಬುದನ್ನು ಮಕ್ಕಳಿಗೆ ತಿಳಿಸಿದರು.
ಶ್ರೀ ಭಾರತಿ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಉಮೇಶ್ ವಿ. ಹೆಗಡೆ ಅಬ್ಳಿಯವರು ಮಾತನಾಡಿ ಶಾಲೆಯ ಅಭಿವೃಧ್ದಿಯ ಕುರಿತು ಮಾತನಾಡಿದರು.
ಈ ಕಾರ್ಯಕ್ರಮವನ್ನು ಕುಮಾರಿ ಸೌಮ್ಯ ಹೆಗಡೆ ನಿರೂಪಿಸಿದರು. ಶ್ರೀಮತಿ ಅನಿತಾ ನಾಯ್ಕ ಸ್ವಾಗತಿಸಿದರು. ಕುಮಾರಿ ಅಂಜನಾ ಶೆಟ್ಟಿ ವಂದಿಸಿದರು.